ಮಂಡ್ಯ : ಸೆಪ್ಟೆಂಬರ್‌ನಿಂದ ಶಾಲೆಗಳನ್ನು ಪ್ರಾರಂಭ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯಾವುದೇ ಕಾರಣಕ್ಕೂ ಸೆಪ್ಟೆಂಬರ್‌ನಲ್ಲಿ ಶಾಲೆಗಳನ್ನು ಆರಂಭ ಮಾಡುವುದಿಲ್ಲ. ಶಾಲೆಗಳನ್ನು ಆರಂಭ ಮಾಡಲು ಸುರೇಶ್ ಕುಮಾರ್ ಕಾತುರರಾಗಿದ್ದಾರೆ ಎನ್ನುವಂತ ಬಿರುದನ್ನು ನನಗೆ ನೀಡಿದ್ದಾರೆ. ಕೊರೊನಾ ಕಾರಣದಿಂದ ಶಾಲೆಗಳನ್ನು ಆರಂಭಿಸುತ್ತಿಲ್ಲ. ಅಲ್ಲದೇ, ಪ್ರಸ್ತುತ ನಮ್ಮ ಮುಂದೆ ಬಹಳ ದೊಡ್ಡ ಸವಾಲು ಇದ್ದು, ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎನ್ನುವ ಬಗ್ಗೆ ಯೋಚಿಸಬೇಕಿದೆ ಎಂದಿದ್ದಾರೆ.
ಮಕ್ಕಳ ಆರೋಗ್ಯದತ್ತ ಗಮನಹರಿಸುವುದು ಮುಖ್ಯ. ಪ್ರಸ್ತುತ ರಾಜ್ಯದಲ್ಲಿ ವಿದ್ಯಾಗಮನ ಎನ್ನುವ ಯೋಜನೆಯನ್ನು ತರಲಾಗಿದ್ದು ಈ ಯೋಜನೆಯು ಅತ್ಯುತ್ತಮವಾದಂತ ಯೋಜನೆಯಾಗಿದ್ದು, ಇಡೀ ರಾಷ್ಟ್ರವೇ ನೋಡುವಂತ ಯೋಜನೆ ಇದಾಗಿದೆ ಎಂದು ಹೇಳಿದ್ದಾರೆ.
ನಾನು ಮಳವಳ್ಳಿ ತಾಲೂಕಿನ ಕೆಂಪಯ್ಯನದೊಡ್ಡಿಗೆ ಹೋಗಿದ್ದ ಸಂದರ್ಭ, ಅಲ್ಲಿ ಊರಿನ ಪಡಸಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಮಕ್ಕಳಿಗೆ ಕಲಿಕೆ ಮುಂದುವರೆಸಬೇಕು ಎಂದಿದ್ದಾರೆ.
ಪಠ್ಯ-ಪುಸ್ತಕಗಳನ್ನು ಎಲ್ಲರ ಮನೆಗೆ ತಲುಪಿಸಿದ್ದೇವೆ. ಅಲ್ಲದೇ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಟಿವಿಯಲ್ಲಿ ಸೇತುಬಂಧ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಇದರೊಂದಿಗೆ ಶಿಕ್ಷಣ ಇಲಾಖೆಯಿಂದಲೂ ಕೂಡಾ ಎರಡು ಚಾನಲ್‌ಗಳನ್ನು ಪ್ರಾರಂಭ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
Follow us on Social media