ವಿಜಯಪುರ: ಕಾಂಗ್ರೆಸ್ ಮುಖಂಡ ರವಿಗೌಡ ಪಾಟೀಲ್ ಅವರ ಮೊಬೈಲ್ ನಿಂದ ವಾಟ್ಸ್ ಆ್ಯಪ್ ಗ್ರೂಪ್ ಗೆ ಅಶ್ಲೀಲ ಫೋಟೋಗಳು ಪೋಸ್ಟ್ ಆಗಿದ್ದು ಅವಾಂತರ ಕಾರಣಕ್ಕಾಗಿತ್ತು.
ವಿಜಯಪುರ ಡಿಸಿಸಿ(ಪ್ರೆಸ್) ಗ್ರೂಪ್ ನಲ್ಲಿ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಫೋನ್ ನಿಂದ ಕೆಲ ಅಶ್ಲೀಲ ಫೋಟೋಗಳು ಪೋಸ್ಟ್ ಆಗಿದ್ದು ಈ ವಿಷಯ ಗೊತ್ತಾಗುತ್ತಿದ್ದಂತೆ ಅವರು ಸಾರ್ವಜನಿಕರ ಕ್ಷಮೆ ಕೇಳಿದ್ದಾರೆ.
ಅಶ್ಲೀಲ ಫೋಟೋಗಳನ್ನು ಕಂಡ ಕೆಲ ವಾಟ್ಸ್ ಆ್ಯಪ್ ಗ್ರೂನ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗ್ರೂಪ್ ನಿಂದ ಹೊರಬಂದಿದ್ದಾರೆ. ನಂತರ ವಿಷಯ ತಿಳಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ ಅವರು ರವಿಗೌಡ ಅವರನ್ನು ಗ್ರೂಪ್ ನಿಂದ ಹೊರ ಹಾಕಿ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿದ ಬಳಿಕ ರವಿಗೌಡ ಅವರು ಕ್ಷಮೆ ಕೇಳಿದ್ದಾರೆ. ಅಲ್ಲದೆ ಈ ಅಚಾತುರ್ಯಕ್ಕೆ ಕಾರಣವನ್ನು ತಿಳಿಸಿದ್ದಾರೆ. ಶನಿವಾರ ರಾತ್ರಿ ಮನೆಯಲ್ಲಿ ಮುಖ ತೊಳೆಯಲು ಹೋಗಿದ್ದಾಗ ಮಕ್ಕಳು ಮೊಬೈಲ್ ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಅವರಿಗೆ ಗೊತ್ತಾಗದೇ ಈ ರೀತಿ ಆಗಿರಬಹುದ ಎಂದು ಹೇಳಿದ್ದಾರೆ.
Follow us on Social media