ಪುಣೆ: ಮಹಾಮಾರಿ ಕೊರೋನಾಗೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಜಗತ್ತಿನಾ ಹಲವು ಫಾರ್ಮಾ ಸಂಸ್ಥೆಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಇದೇ ವೇಳೆ ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನೆಕಾ ಲಸಿಕೆ ಕಂಡು ಹಿಡಿಯುವಲ್ಲಿ ಒಂದು ಹೆಜ್ಜೆ ಮುಂದಿದೆ.
ಆಕ್ಸ್ ಫರ್ಡ್ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಕೋವಿಡ್ ಶೀಲ್ಡ್ ಹೆಸರಿನ ಲಸಿಕೆ ಮೊದಲ ಹಂತ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ.
ಇನ್ನು ಭಾರತದಲ್ಲಿ ಸೀರಮ್ ಸಂಸ್ಧೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಜತೆಗೂಡಿ ಕೋವಿಡ್ ವೈರಸ್ ನಿಯಂತ್ರಣದ ಲಸಿಕೆ ತಯಾರಿಕೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಧೆಯ ಸಿಇಓ ಅದರ್ ಪೂನಾವಾಲಾ ಲಸಿಕೆ ತಯಾರಿಸುವ ಬಗ್ಗೆ ಮಾತನಾಡಿದ್ದಾರೆ.
2021ರ ಕೊನೆಯಲ್ಲಿ ಲಸಿಕೆಯನ್ನು ನಾವು ಘೋಷಣೆ ಮಾಡಬಹುದು. ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಲಸಿಕೆ ತಯಾರಿಕೆಗೆ 200 ದಶಲಕ್ಷ ಡಾಲರ್ ಹಣವನ್ನು ಹೂಡಿಕೆ ಮಾಡಿದ್ದೇವೆ. ನಮ್ಮ ಬಳಿ ಲಸಿಕೆ ತಯಾರಿಕೆಗೆ 6 ಯಂತ್ರಗಳಿವೆ. ಇವು ಪ್ರತಿ ನಿಮಿಷಕ್ಕೆ 500ರಂತೆ ಗಂಟೆಗೆ 30 ಸಾವಿರ ಸೀಸೆಯಲ್ಲಿ ಲಸಿಕೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
Follow us on Social media