ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಪೌಷ್ಠಿಕತೆಯ ಮಟ್ಟವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಕ್ಷಿರಭಾಗ್ಯ ಯೋಜನೆ ಫಲಾನುಭವಿಗಳಿಗೆ ಪಡಿತರದೊಂದಿಗೆ ಹಾಲಿನ ಪುಡಿ ವಿತರಿಸುವಂತೆ ರಾಜ್ಯಸರ್ಕಾರ ಕೋವಿಡ್-19 ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆಗಳಿಗೆ ನಿರ್ದೇಶನ ನೀಡಿದೆ.
ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡಾಗಿನಿಂದಲೂ ಬಹುತೇಕ ಮಂದಿ ಆರ್ಥಿಕವಾಗಿ ಹಿಂದುಳಿದಿರುವ ಸರ್ಕಾರಿ ಮಕ್ಕಳ ಪೌಷ್ಟಿಕ ಮಟ್ಟದ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿದೆ.
ರಾಜ್ಯಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಂದ ಸುಮಾರು 64 ಲಕ್ಷ ವಿದ್ಯಾರ್ಥಿಗಳನ್ನು ಈ ಯೋಜನೆ ಒಳಗೊಳ್ಳಲಿದೆ ಎಂದು ರಾಜ್ಯ ಹಾಲು ಮಹಾಮಂಡಳ ವ್ಯವಸ್ಥಾಪಕ ನಿರ್ದೇಶಕ ಬಿಸಿ ಸತೀಶ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಆರು ತಿಂಗಳಿನಿಂದ ಆರು ವರ್ಷದೊಳಗಿನ 39.5 ಲಕ್ಷ ಅಂಗನವಾಡಿ ಮಕ್ಕಳಿಗೆ ಕೆಎಂಎಫ್ ಈಗಾಗಲೇ ಹಾಲು ವಿತರಿಸುತ್ತಿದೆ. ಎಲ್ಲಾ ಮಕ್ಕಳಿಗೂ ಪ್ರತಿದಿನ 15 ಗ್ರಾಮ್ ಹಾಲಿನ ಪುಡಿಯನ್ನು ವಿತರಿಸಲಾಗುತ್ತಿದೆ.ಪ್ರತಿದಿನ ಮೂರು ಲಕ್ಷ ಲೀಟರ್ ಹಾಲನ್ನು 35 ಮೆಟ್ರಿಕ್ ಟನ್ ಹಾಲಿನ ಪುಡಿಯನ್ನಾಗಿ ಮಾರ್ಪಡಿಸಿ ಇಂತಹ ಮಕ್ಕಳಿಗೆ ನೀಡಲಾಗುತ್ತಿದೆ. ಈಗ ಯೋಜನೆಯನ್ನು ಒಂದರಿಂದ 10ನೇ ತರಗತಿಯವರೆಗೂ ನೀಡುತ್ತಿರುವುದರಿಂದ 64 ಲಕ್ಷಕ್ಕೂ ಹೆಚ್ಚು ಯುವಕರು ಕೂಡಾ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಕ್ಷೀರ ಭಾಗ್ಯ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೂ 18 ಗ್ರಾಮ್ ಪೌಡರ್ ನೀಡಲಾಗುತ್ತಿದೆ. ಆದರೆ, ಸಾಂಕ್ರಾಮಿಕ ರೋಗದ ಕಾರಣ ಶಾಲೆ ತೆರೆಯದ ಕಾರಣ ವಿದ್ಯಾರ್ಥಿಗಳಿಗೆ ಹಾಲು ದೊರೆಯುತ್ತಿಲ್ಲ. ಈ ಹಾಲಿನಲ್ಲಿ ಶೇ.3.5 ರಷ್ಟು ಕೊಬ್ಬಿನಾಂಶ ಇರಲಿದೆ. ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಅರ್ಧ ಕಿಲೋನಂತೆ ಎರಡು ತಿಂಗಳವರೆಗೂ ಹಾಲಿನ ಪೌಡರ್ ವಿತರಿಸಲಿದೆ. ಈ ಸಂಬಂಧ ಸದ್ಯದಲ್ಲಿ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
Source : The New Indian Express
Follow us on Social media