ಕುಂದಾಪುರ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಪುಷ್ಕರಣಿಯಲ್ಲಿ ನಾಗರಪಂಚಮಿಯ ದಿನವಾದ ಸೋಮವಾರ ಈಜಲು ಹೋದ ಇಬ್ಬರು ಯುವಕರ ಪೈಕಿ ಕಾರ್ಕಡ ನಿವಾಸಿ ವಿನೋದ್ ಗಾಣಿಗ(28) ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರಿಗೂ ಈಜು ಗೊತ್ತಿದ್ದು, ಮಳೆ ಕಾರಣ ಕೆರೆಯಲ್ಲಿ ನೀರು ತುಂಬಿದ್ದರಿಂದ ವಿನೋದ್ ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಮೃತದೇಹವನ್ನು ಮೇಲೆತ್ತಿದ್ದಾರೆ. ಮೃತ ವಿನೋದ್ ದೇಹದಾರ್ಡ್ಯಪಟುವಾಗಿದ್ದರು. ಕೋಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social mediaAbout the author
Related Posts
November 21, 2022
ಮಂಗಳೂರು: ಆಟೋದಲ್ಲಿ ಸ್ಪೋಟ ಪ್ರಕರಣದ ತನಿಖೆ ನಡೆಸಲು 10 ತಂಡ ರಚನೆ ಕಮಿಷನರ್
November 8, 2022