ನ್ಯೂಯಾರ್ಕ್: ಮೈಕ್ರೋಸಾಫ್ಟ್ ಕಾರ್ಪ್ ಅಮೆರಿಕಾದಲ್ಲಿ ಟಿಕ್‌ಟಾಕ್ ಕಾರ್ಯಾಚರಣೆಗಳ ಸ್ವಾಧೀನಕ್ಕೆ ಪ್ರಯತ್ನಿಸುತ್ತಿದೆಯೆ? ಈ ವಿಷಯದ ಬಗ್ಗೆ ಬಲ್ಲ ಮೂಲಗಳ ಪ್ರಕಾರ ಹೌದು. ಇದಕ್ಕಾಗಿನ ಒಪ್ಪಂದವು ಸಾಫ್ಟ್‌ವೇರ್ ಕಂಪನಿಗೆ ಜನಪ್ರಿಯ ಸಾಮಾಜಿಕ-ಮಾಧ್ಯಮ ಸೇವೆಯ ಬಲ ನೀಡುತ್ತದೆ. ಅಲ್ಲದೆ ವೀಡಿಯೊ ಶೇರಿಂಗ್ ಅಪ್ಲಿಕೇಶನ್‌ನ ಚೀನಾದ ಮಾಲೀಕರ ಮೇಲಿನ ಅಮೆರಿಕಾ ಸರ್ಕಾರದ ಒತ್ತಡವನ್ನು ನಿವಾರಿಸುತ್ತದೆ.
ಟ್ರಂಪ್ ಆಡಳಿತವು ಚೀನಾ ಮೂಲದ ಬೈಟ್‌ಡ್ಯಾನ್ಸ್ ಲಿಮಿಟೆಡ್‌ಗೆ ಟಿಕ್‌ಟಾಕ್‌ನ ಅಮೆರಿಕಾ ಕಾರ್ಯಾಚರಣೆಯಲ್ಲಿ ತನ್ನ ಪಾಲನ್ನು ಬಿಟ್ಟುಕೊಡಲು ನಿರ್ದೇಶಿಸಬೇಕೆಂದು ಒತ್ತಾಯಿಸಿದೆ. ಚೀನಾದ ಕಂಪನಿಯ ಅಪ್ಲಿಕೇಶನ್‌ನ ನಿಯಂತ್ರಣದಿಂದಾಗಿ ಅಮೆರಿಕಾ ರಾಷ್ಟ್ರೀಯ ಭದ್ರತಾ ಅಪಾಯಗಳ ಬಗ್ಗೆ ತನಿಖೆ ನಡೆಸುತ್ತಿದೆ.
ಶುಕ್ರವಾರದಂದು ಆದೇಶವನ್ನು ಪ್ರಕಟಿಸಲು ಆಡಳಿತವು ಸಿದ್ಧವಾಗಿದ್ದರೆ, ಈ ವಿಷಯದ ಬಗ್ಗೆ ತಿಳಿದಿದ್ದ ಮೂಲಗಲು ಹೇಲೀದಂತೆ ಒಬ್ಬ ವ್ಯಕ್ತಿ ಈ ಆದೇಶ ಜಾರಿಗೆ ತಡೆಯೊಡ್ಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಚ್ಚಿನ ಪರಿಶೀಲನೆ ಬಾಕಿ ಇದ್ದು ಚರ್ಚೆಗಳು ಖಾಸಗಿಯಾಗಿರುವುದರಿಂದ ಯಾರೊಬ್ಬರನ್ನೂ ಹೆಸರಿಸಬಾರದು ದು ಎಂದು ಹೇಳಲಾಗಿದೆ. ಮೈಕ್ರೋಸಾಫ್ಟ್ ಮತ್ತುಟಿಕ್‌ಟಾಕ್‌ನ ವಕ್ತಾರರು ಯಾವುದೇ ಸಂಭಾವ್ಯ ಮಾತುಕತೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಪ್ಲಿಕೇಶನ್ ಕುರಿತು ಸಾಫ್ಟ್‌ವೇರ್ ಕಂಪನಿಯ ಆಸಕ್ತಿಯನ್ನು ಫಾಕ್ಸ್ ಬಿಸಿನೆಸ್ ನೆಟ್‌ವರ್ಕ್ ಈ ಹಿಂದೆ ವರದಿ ಮಾಡಿತ್ತು.
“ನಾವು ಟಿಕ್‌ಟಾಕ್ ಬಗ್ಗೆ ಗಮನ ನೀಡಿದ್ದೇವೆ. ಟಿಕ್‌ಟಾಕ್ ಅನ್ನು ನಿಷೇಧಿಸುವ ಬಗ್ಗೆ ಟ್ರಂಪ್ ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಟಿಕ್‌ಟಾಕ್‌ಗೆ ಸಂಬಂಧಿಸಿದಂತೆ ನಾವು ಸಾಕಷ್ಟು ಪರ್ಯಾಯಗಳನ್ನು ಶೋಧಿಸಬೇಕಿದೆ” ಅಮೆರಿಕಾ ಸರ್ಕಾರದ ಪ್ರತಿನಿಧಿ ಹೇಳಿದ್ದಾರೆ. ಆದರೆ ಮೈಕ್ರೋಸಾಫ್ಟ್ ಚೀಆ ಸಂಸ್ಥೆಯಡಿಯಲ್ಲಿನ ಟಿಕ್‌ಟಾಕ್ ಅನ್ನು ಖರೀದಿಸಲು ಆಸಕ್ತಿ ಹೊಂದಿದ್ದು ಈ ಸಂಬಂಧ ಸೋಮವಾರ ಸ್ಪಷ್ಟ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.
Follow us on Social media