ನವದೆಹಲಿ: ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಆದರೆ ದೆಹಲಿ ಸರ್ಕಾರ ಪ್ರತಿ ಲೀಟರ್ ಡಿಸೇಲ್ ಗೆ ಎಂಟು ರೂ. ಇಳಿಸಿ ಜನರಿಗೆ ಗುಡ್‌ನ್ಯೂಸ್ ನೀಡಿದೆ.
ನವದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ದರವೇ ಜಾಸ್ತಿ ಇತ್ತು. ಹೀಗಾಗಿ ಡೀಸೆಲ್ ದರದ ವ್ಯಾಟ್ ಅನ್ನು ಸರ್ಕಾರ ಇಳಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಡೀಸೆಲ್ ದರದಲ್ಲಿ ಭಾರೀ ಕುಸಿತ ಕಂಡಿದೆ. ಜುಲೈ ಆರಂಭದಲ್ಲಿ 82 ಇದ್ದ ಡೀಸೆಲ್ ದರ ಈಗ 73ಕ್ಕೆ ಬಂದಿದೆ. ಇದು ಡೀಸೆಲ್ ಗ್ರಾಹಕರನ್ನ ಖಷಿಗೊಳಿಸಿದೆ.
Follow us on Social media