ಮಂಗಳೂರು : ಜುಲೈ 30, 31 ಹಾಗೂ ಆಗಸ್ಟ್ 1ರಂದು ವದ್ಯಕೀಯ ಪ್ರವೇಶಾತಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಕೇರಳ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಗಡಿ ಭಾಗಗಳಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೇರಳದಿಂದ ಮಂಗಳೂರಿನ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆಗಮಿಸುವ ಅಭ್ಯರ್ಥಿಗಳಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ತಲಪಾಡಿ ಗಡಿ ಮೂಲಕ ಸುನ್ಮಾರು 400 ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಅವರಿಗೆ ತಲಪಾಡಿಯಿಂದ ಮಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಜುಲೈ 30, 31, ಆಗಸ್ಟ್ 1ರಂದು ಬಸ್ ಸೌಲಭ್ಯ ಇರಲಿದೆ.
ಇನ್ನು ಸಾರಡ್ಕ ಗಡಿಯಯಿಂದಲೂ ಕೂಡ ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರಡ್ಕ ಮೂಲಕ ೪೫ ಅಭ್ಯರ್ಥಿಗಳು ಮಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲಿದ್ದು, ಅವರಿಗೆ ಕರೆ ತರುವ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರಡ್ಕದಲ್ಲಿ ಜುಲೈ 30 ಹಾಗೂ 31ರಂದು ಮಾತ್ರ ಬಸ್ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 1ರಂದು ನಡೆಯುವ ಪರೀಕ್ಷೆಗೆ ಅಭ್ಯರ್ಥಿಗಳಿಲ್ಲದ ಕಾರಣ ಎರಡೇ ದಿನ ಸಾರಡ್ಕ ಮೂಲಕ ಬಸ್ ವ್ಯವಸ್ಥೆ ಇರಲಿದೆ.
ಆಗಸ್ಟ್ 1ರಂದು ಕನ್ನಡ ಪರೀಕ್ಷೆ ನಡೆಯಲಿದೆ. ಕೇವಲ ಹೊರನಾಡು ಹಾಗೂ ಗಡಿನಾಡಿನ ಅಭ್ಯರ್ಥಿಗಳಿಗೆ ಮಾತ್ರವೇ ಇರಲಿದೆ. ಇನ್ನು ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪರೀಕ್ಷೆ ಇದೀಗ ಕೋವಿಡ್ ಕಾರಣದಿಂದ ಮಂಗಳೂರಿನಲ್ಲಿ ನಡೆಯುತ್ತಿದೆ.
Follow us on Social media