ನವದೆಹಲಿ: ಟೀಂ ಇಂಡಿಯಾದ ಯಶಸ್ವಿ ಕೋಚ್ ಆಗಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಅವರು ಮುಖ್ಯ ಕೋಚ್ ಹುದ್ದೆಯಿಂದ ಕೆಳಗೆ ಇಳಿಯಬೇಕಾಯಿತು.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿದ್ದ ಸಮಯದ ಬಗ್ಗೆ ವಿಷಾದವಿಲ್ಲ ಆದರೆ ಅಧಿಕಾರಾವಧಿಯ ಅಂತ್ಯವು ಉತ್ತಮವಾಗಿರಬೇಕೆಂದು ಭಾವಿಸುವುದು ಸಹಜ ಎಂದು ಹೇಳಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ಬಿರುಕಿನ ನಂತರ 2017ರ ಚಾಂಪಿಯನ್ಸ್ ಟ್ರೋಫಿ ಬಳಿಕ ಅನಿಲ್ ಕುಂಬ್ಳೆ ಸ್ಥಾನದಿಂದ ಕೆಳಗಿಳಿದರು.
“ಆ ಒಂದು ವರ್ಷದ ಅವಧಿಯಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಕೆಲವು ಕೊಡುಗೆಗಳನ್ನು ನೀಡಿದ್ದೇವೆ ಅದರ ಬಗ್ಗೆ ಹೆಮ್ಮೆ ಇದೆ. ಕೋಚ್ ಸ್ಥಾನದಿಂದ ಕೆಳಗಿಳಿದ ನಂತರವೂ ನಾನು ಸಂತೋಷದಿಂದ ಸಾಗುತ್ತಿದ್ದೇನೆ ಎಂದು ಮಾಜಿ ಸ್ಪಿನ್ನರ್ ಮಾಜಿ ಜಿಂಬಾಬ್ವೆಯ ಕ್ರಿಕೆಟಿಗ ಪೊಮ್ಮಿ ಎಂಬಂಗ್ವಾ ಅವರಿಗೆ ತಿಳಿಸಿದರು.
“ಅಂತ್ಯವು ಉತ್ತಮವಾಗಿರಬೇಕೆಂದು ಬಾವಿಸುವುದು ಸಹಜ. ಆದರೆ ನನಗಾದಿದ್ದರ ಬಗ್ಗೆ ಯಾವುದೇ ವಿಷಧವಿಲ್ಲ. ಆ ಒಂದು ವರ್ಷದಲ್ಲಿ ನಾನು ಮಹತ್ವದ ಪಾತ್ರ ವಹಿಸಿದ್ದೇನೆ ಎಂಬುದರ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದರು.
ಕುಂಬ್ಳೆ ಅವರು 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ತಲುಪಿದ ತಂಡದೊಂದಿಗೆ ಭಾರತದ ತರಬೇತುದಾರರಾಗಿ ಒಂದು ವರ್ಷದ ಯಶಸ್ವಿ ಅವಧಿಯನ್ನು ಹೊಂದಿದ್ದರು ಮತ್ತು ಪ್ರಬಲ ಟೆಸ್ಟ್ ತಂಡವಾಗಿದ್ದರು, ಅವರ ಅಧಿಕಾರಾವಧಿಯಲ್ಲಿ 17 ಟೆಸ್ಟ್‌ಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದ್ದರು.
ಟೀಂ ಇಂಡಿಯಾ ಪರ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಗಳನ್ನು ಅನಿಲ್ ಕುಂಬ್ಳೆ ಪಡೆದಿದ್ದರು.
Follow us on Social media