ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಟ್ವೀಟ್ ಮಾಡಿ, ಇಂದು ನನ್ನ ಆತ್ಮೀಯ ಮಿತ್ರ, ದಶಕಗಳ ರಾಜಕೀಯ ಜೀವನದ ಒಡನಾಡಿ, ಸಾರ್ವಜನಿಕ ಜೀವನದಲ್ಲಿ ಅಚ್ಚಳಿಯದ ನೆನಪು, ಸಾಧನೆ, ಸಾರ್ಥಕತೆಗಳನ್ನು ಬಿಟ್ಟುಹೋಗಿರುವ ಹಿರಿಯ ನಾಯಕ ಅನಂತಕುಮಾರ್ ಅವರ ಜನ್ಮದಿನ. ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ಸದಾ ಸ್ಫೂರ್ತಿಯಾಗಿರುವ ಅನಂತಕುಮಾರ್, ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ನೀಡಿದ ಕೊಡುಗೆ ಅನನ್ಯ ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ನಮ್ಮ ಪಕ್ಷದ ಧೀಮಂತ ನಾಯಕರು ಮತ್ತು ನನ್ನ ಮಾರ್ಗದರ್ಶಿಗಳಾದ ಅನಂತ್ ಕುಮಾರ್ ಅವರ ಜಯಂತಿಯಂದು ನನ್ನ ಗೌರವ ಪೂರ್ವಕ ಪ್ರಣಾಮಗಳು. ತಮ್ಮ ಮೇರು ವ್ಯಕ್ತಿತ್ವ, ನಡೆ-ನುಡಿ, ಸಲಹೆಗಳ ಮೂಲಕ ಸಾಮಾಜಿಕ ಜೀವನಕ್ಕೆ ಆದರ್ಶವಾಗಿದ್ದ ಅವರ ನೆನಪು ಇಂದಿಗೂ ಕಾಡುತ್ತಿದೆ ಎಂದು ತಿಳಿಸಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರು 2018ರ ನವೆಂಬರ್ 12 ರಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
Follow us on Social media