Breaking News

ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಮುಂದಿನ ವರ್ಷಕ್ಕೂ ಅನ್ವಯ, ಒಂದು ಷರತ್ತು!

ನವದೆಹಲಿ: ಪ್ರಸ್ತುತ ಮುಂದೂಡಿಕೆಯಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮಾರಾಟವಾಗಿರುವ ಟಿಕೆಟ್ ಗಳು ಮುಂದಿನ ವರ್ಷಕ್ಕೆ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ. ಆದರೆ ಮುಂದೂಡಿಕೆಯಾಗಿರುವ ಟೂರ್ನಿ ಆಸ್ಟ್ರೇಲಿಯದಲ್ಲಿ ನಡೆದರೆ ಮಾತ್ರ ಎಂದಿದೆ.

ಒಂದು ವೇಳೆ ಈ ಟೂರ್ನಿ 2022ಕ್ಕೆ ಮುಂದೂಡಿಕೆಯಾದರೆ ಅಥವಾ ಭಾರತದ ಆತಿಥ್ಯದಲ್ಲಿ ನಡೆದರೆ ಎಲ್ಲ ಟಿಕೆಟ್ ಹಣವನ್ನು ಮರು ಪಾವತಿ ಮಾಡಲಾಗುವುದು ಎಂದು ಐಸಿಸಿ ತನ್ನ ವೆಬ್ ಸೈಟ್ ನಲ್ಲಿ ಸೋಮವಾರ ತಿಳಿಸಿದೆ. ಕೋವಿಡ್-19ನಿಂದಾಗಿ ವಿಶ್ವ ಕಪ್ ಟೂರ್ನಿಯನ್ನು ಮುಂದೂಡಲಾಗಿದೆ. 

ಅಕ್ಟೋಬರ್-ನವೆಂಬರ್ ನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೀಗ ಸಾಂಕ್ರಾಮಿಕ ಪಿಡುಗಿನಿಂದಾಗಿ ಮುಂದೂಡಲಾಗಿದೆ. ಮುಂದೂಡಿಕೆಯಾಗಿರುವ ಟೂರ್ನಿ ಯಾವ ರಾಷ್ಟ್ರದಲ್ಲಿ ನಡೆಯುತ್ತದೆ ಎಂಬುದನ್ನು ಐಸಿಸಿ ಇನ್ನೂ ನಿರ್ಧರಿಸಿಲ್ಲ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×