ಉಡುಪಿ: ಸೈಬೀರಿಯಾದ ಬೆಲ್ಗ್ರೇಡ್ನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಉಡುಪಿ ಮೂಲದ ಪ್ರಸಿದ್ಧ ಛಾಯಾಗ್ರಾಹಕ ಪತ್ರಿಕೋದ್ಯಮ ವಿಭಾಗದಲ್ಲಿ ಎಫ್ಐಎಪಿ ಗೋಲ್ಡ್ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅವರ ಗ್ರಾಮೀಣ ಮಕ್ಕಳು ಕೆಸರಿನಲ್ಲಿ ಆಟವಾಡುತ್ತಿರುವ ಚಿತ್ರಕ್ಕೆ ಈ ಪ್ರತಿಷ್ಠಿತ ಗೌರವ ಸಿಕ್ಕಿದೆ.
ಹಲವಾರು ದೇಶಗಳ ಛಾಯಾಗ್ರಾಹಕರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಉಡುಪಿಯ ರಘು ಪ್ರಶಸ್ತಿ ಗಳಿಸಿ ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ. ಇನ್ನು ರಘು ಪಾಲಿಗೆ ಇದು 24 ನೇ ಅಂತರರಾಷ್ಟ್ರೀಯ ಪ್ರಶಸ್ತಿ ಆಗಿದೆ.
ರಘು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು ಅವರ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನಪದ ಸೌಂದರ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾರೆ.
ಅವರ ಸಾಧನೆಗಳನ್ನು ಗುರುತಿಸಿದ ನಿಕಾನ್ ಸಂಸ್ಥೆ ಅವರನ್ನು ಕರ್ನಾಟಕ ರಾಜ್ಯನಿಕಾನ್ ಇನ್ಫ್ಲುಎನ್ಸರ್ ಆಗಿ ನೇಮಕ ಮಾಡಿದೆ, ಇವರು ಪ್ರಸಿದ್ದ ಛಾಯಾಗ್ರಾಹಕ ಗುರುದತ್ ಅವರ ವಿದ್ಯಾರ್ಥಿಯಾಗಿದ್ದಾರೆ.
Follow us on Social media