Breaking News

4 ತಿಂಗಳಲ್ಲಿ ಶೇ.67ರಷ್ಟು ಬೆಳವಣಿಗೆ ಹಿನ್ನೆಲೆ: ಬೆಂಗಳೂರಿನಲ್ಲಿ ಹೊಸ ಜೂಮ್ ಟೆಕ್ ಸೆಂಟರ್ ಸ್ಥಾಪನೆ ಶೀಘ್ರ

ಬೆಂಗಳೂರು: ಗೂಗಲ್, ಮೈಕ್ರೋಸಾಫ್ಟ್ ಮತ್ತು ಜಿಯೋ ಮುಂತಾದ ಟೆಕ್ ಸಂಸ್ಥೆಗಳ ಪ್ರತಿಸ್ಪರ್ಧಿ ಜನಪ್ರಿಯ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಸಂಸ್ಥೆ ಜೂಮ್ ತನ್ನ ಭಾರತೀಯ ಹಾಗೂ  ಜಾಗತಿಕ ಸೇವೆಗಳ ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ತನ್ನ ಮೊದಲ ಟೆಕ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಿದೆ. ಈ ವಿಚಾರವನ್ನು ಸಂಸ್ಥೆಯ ಪ್ರಾಡಕ್ಟ್ ಆಂಡ್ಎಂಜಿನಿಯರಿಂಗ್ ವಿಭಾಗದ ಡೈರೆಕ್ಟರ್ ವೆಲ್ಚಾಮಿ ಶಂಕರಲಿಂಗಂ ಬಹಿರಂಗಪಡಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಜೂಮ್ ಬೆಂಗಳೂರು ಟೆಕ್ ಕೇಂದ್ರಕ್ಕೆ ಡೆವೊಪ್ಸ್ ಎಂಜಿನಿಯರ್‌ಗಳು, ಐಟಿ, ಸೆಕ್ಯುರಿಟಿ ಮತ್ತು ಬಿಸಿನೆಸ್ ಆಪರೇಶನ್‌ಗಳನ್ನು ನೇಮಕ ಮಾಡಲು ಪ್ರಾರಂಭಿಸಿದೆ. ಈ ವರ್ಷ ಜನವರಿಯಿಂದ ಏಪ್ರಿಲ್ ನಡುವೆ ದೇಶದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಸೇವೆಯು ಶೇ.  6700 ರಷ್ಟು ಬೆಳವಣಿಗೆಯನ್ನು ಕಂಡಿದೆ.  “ಜನವರಿ-ಏಪ್ರಿಲ್ ನಡುವೆ ಭಾರತದಲ್ಲಿ ಪೇಯ್ಡ್  ಬಳಕೆದಾರರ ಸಂಖ್ಯೆ 4 ಪಟ್ಟು ಹೆಚ್ಚಾಗಿದೆ” ಎಂದು ಶಂಕರಲಿಂಗಂ ಹೇಳೀದ್ದಾರೆ.

ಜೂಮ್ ತನ್ನ ಅಸ್ತಿತ್ವದಲ್ಲಿರುವ ಮುಂಬೈ ಕಚೇರಿಯನ್ನು ಅದರ ಗಾತ್ರಕ್ಕಿಂತ ಮೂರು ಪಟ್ಟು ವಿಸ್ತರಿಸಲಿದೆ. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಜೂಮ್ ಭಾರತದಲ್ಲಿ ಮುಂಬೈ ಮತ್ತು ಹೈದರಾಬಾದ್‌ನಲ್ಲೂ ಡೇಟಾ ಕೇಂದ್ರಗಳನ್ನು ಹೊಂದಿದೆ. ಮತ್ತು ಕೊರೋನಾ ಸಂಕಟದ ಈ ಅವಧಿಯಲ್ಲಿ ಸಂಸ್ಥೆ ಭಾರತದಲ್ಲಿನ ತನ್ನೆಲ್ಲಾ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸ ಮಾಡಲು ನಿರ್ದೇಶಿಸಿದೆ. 

“ಭಾರತವು ಜೂಮ್ ಗೆ ಮಹತ್ವದ ತಾಣವಾಗಿದೆ. ಮತ್ತು ಇಲ್ಲಿಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ನಾವು  ಆಶಿಸುತ್ತೇವೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತದ 2,300 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ನಮ್ಮ ಸೇವೆಗಳನ್ನು ಉಚಿತವಾಗಿ ನೀಡಲು ನಾವು ಹೆಮ್ಮೆಪಡುತ್ತೇವೆ ಮತ್ತು ಈ ಮೂಲಕ ನಮ್ಮ ಸಂಸ್ಥೆ ಈ ದೇಶದಲ್ಲಿ ಇನ್ನಷ್ಟು ಹೆಚ್ಚು ಕೆಲಸ ಮಾಡುವುದನ್ನು ನೋಡಲಿದ್ದೇವೆ. ಈ ನಿಟ್ಟಿನಲ್ಲಿ ನಾವು ಭಾರತದ ಜನರು ಮತ್ತು ಸರ್ಕಾರದೊಂದಿಗೆ ಕೈ ಜೋಡಿಸಲಿದ್ದೇವೆ.”ಜೂಮ್ ಸಿಇಒ ಎರಿಕ್ ಎಸ್. ಯುವಾನ್ ಹೇಳಿದರು.

“ಮುಂದಿನ ಕೆಲವು ವರ್ಷಗಳಲ್ಲಿ ತಂತ್ರಜ್ಞಾನ ಕೇಂದ್ರಕ್ಕೆ ಪ್ರಮುಖ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನಾವು ಯೋಜಿಸುತ್ತಿದ್ದೇವೆ, ಭಾರತದ ಉನ್ನತ-ವಿದ್ಯಾವಂತ ಎಂಜಿನಿಯರಿಂಗ್ ಪ್ರತಿಭಾನ್ವಿತರಿಗೆ ನಾವು ಉದ್ಯೋಗ ನೀಡಲಿದ್ದು ಇದು ಸಂಸ್ಥೆಯ ಮುಂದಿನ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ, ”ಎಂದು ಅವರು ಹೇಳಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×