ಉಡುಪಿ : ಬೆಂಗಳೂರಿನಲ್ಲಿ ಉದ್ಯೋಗ ಹೊಂದಿದ್ದ ಯುವಕ ಲಾಕ್‌ಡೌನ್ ಕಾರಣದಿಂದ ವ್ಯವಹಾರವಿಲ್ಲವೆಂದು ನೊಂದು ನೇಣಿಗೆ ಶರಣಾದ ಘಟನೆ ಕೋಟದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ತಾಲೂಕಿನ ಗಿಳಿಯಾರು ಗ್ರಾಮದ ರಾಜಶೇಖರ ದೇವಸ್ಥಾನ ಸಮೀಪದ ನಿವಾಸಿ ನಿತಿಶ್(31) ಎಂದು ಗುರುತಿಸಲಾಗಿದೆ.
ಯುವಕ ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ವ್ಯವಹಾರ ಹೊಂದಿದ್ದು ನಾಲ್ಕು ಲಾಕ್‌ಡೌನ್ ಕಾರಣದಿಂದಾಗಿ ನಾಲ್ಕು ತಿಂಗಳುಗಳ ಹಿಂದೆ ಆತನ ವ್ಯವಹಾರವಿಲ್ಲದ ಕಾರಣ ಕೋಟಕ್ಕೆ ವಾಪಾಸ್ ಆಗಮಿಸಿದ್ದರು. ಹಾಗೆಯೇ ಕೆಲಸವಿಲ್ಲದೆ ನೊಂದಿದ್ದರು ಎಂದು ವರದಿ ತಿಳಿಸಿದೆ.
ನಿತಿಶ್ ಜುಲೈ 8ರ ರಾತ್ರಿ ನೇಣು ಬಿಗಿದು ಆತ್ಮಹತ್ಯೆಗೊಂಡಿದ್ದಾರೆ ಎಂದು ಮೃತರ ಸಹೋದರ ದೂರು ನೀಡಿದ್ದು ಈ ಕುರಿತಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
Follow us on Social media