ಕಲಬುರಗಿ: ವಿದ್ಯುತ್ ಸ್ಪರ್ಶಿಸಿದ್ದ ಹಸುವನ್ನು ರಕ್ಷಿಸಲು ತೆರಳಿದ್ದ ಬಾಲಕ ಸೇರಿ ಹಸು ಸಾವನ್ನಪ್ಪಿದ ಮನಕಲಕುವ ಘಟನೆ ಜಿಲ್ಲೆಯ ಶಹಬಾದ್ ತಾಲ್ಲೂಕಿನ ಶಂಕರವಾಡಿ ಗ್ರಾಮದಲ್ಲಿ ನಡೆದಿದೆ.
15 ವರ್ಷದ ಬೀರಣ್ಣ ಭೀಮಾಶಂಕರ ಮೃತ ಬಾಲಕ. ದನಗಳನ್ನು ಮೇಯಿಸಲು ತೆರಳಿದಾಗ ಕಾಂಪೌಂಡ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಹಸು ತುಳಿದಿದೆ. ಗಾಬರಿಗೊಂಡ ಬಾಲಕ ತಕ್ಷಣವೇ ಹಸು ರಕ್ಷಿಸಲು ಮುಂದಾಗಿದ್ದಾನೆ.
ಈ ಸಂದರ್ಭದಲ್ಲಿ ಬಾಲಕನಿಗೂ ವಿದ್ಯುತ್ ತಗುಲಿದ್ದು, ಬಾಲಕ ಮತ್ತು ಹಸು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
Follow us on Social media