
ಮೂಲತಃ ಬಾಗಲಕೋಟೆಯವರಾದ ಕಲ್ಲಮುಂಡ್ಕೂರು ಉಪವಿಭಾಗದ ಮೆಸ್ಕಾಂ ಸಿಬ್ಬಂದಿ( ಲೈನ್ ಮೆನ್) ದಿಗಂಬರ್ ಶನಿವಾರ ಸಾಯಂಕಾಲ ತಮ್ಮ ಸಹೋದ್ಯೋಗಿ ಲೈನ್ ಮ್ಯಾನ್ ಜೊತೆ ನಿಡ್ಡೋಡಿ ಪರಿಸರದಲ್ಲಿ ವಿದ್ಯುತ್ ದುರಸ್ತಿ ಕೆಲಸ ಮಾಡುತ್ತಿದ್ದರು. ದಿಗಂಬರ ಅವರು ಕಂಬ ಹತ್ತಿ ದುರಸ್ತಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ, ಅವರು ಕಂಬದಲ್ಲೇ ಒದ್ದಾಡುವಂತಾಯಿತು. ಇನ್ನೊಬ್ಬ ಲೈನ್ ಮ್ಯಾನ್ ಘಟನೆಯಿಂದ ಗಾಬರಿಗೊಂಡಿದ್ದು, ಅಲ್ಲೇ ಪಕ್ಕದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವಾಮಂಜೂರಿನ ಕೇಶವ ಎಂಬವರು ತಕ್ಷಣ ಕಂಬಕ್ಕೆ ಹತ್ತಿ, ದಿಗಂಬರ್ ಅವರನ್ನು ರಕ್ಷಿಸಿದ್ದಾರೆ. ದಿಗಂಬರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸುತ್ತಿದ್ದಾರೆ.
