ನವದೆಹಲಿ: ಕೊರೋನಾ ಮಹಾಮಾರಿ ಎಫೆಕ್ಟ್ ಭಾರತದ ಅತಿದೊಡ್ಡ ಬಿಸ್ಕಟ್ ತಯಾರಕ ಕಂಪನಿ ಬ್ರಿಯಾನಿಯಾ ಇಂಡಸ್ಟ್ರೀಸ್ ತ್ರೈಮಾಸಿಕದಲ್ಲಿ ಬರೋಬ್ಬರಿ 545 ಕೋಟಿ ರುಪಾಯಿ ಲಾಭ ಗಳಿಸಿದೆ.
ತ್ರೈಮಾಸಿಕದಲ್ಲಿ 117ರಷ್ಟು ಭಾರೀ ಏರಿಕೆ ದಾಖಲಿಸಿದೆ. ಕಳೆದ ಹಣಕಾಸು ವರ್ಷದ ಅವಧಿಯಲ್ಲಿ 251.03 ಗಳಿಸಿದ್ದ ಬ್ರಿಟಾನಿಯಾ ಕಳೆದ ತ್ರೈಮಾಸಿಕದಲ್ಲಿ 545.7 ಕೋಟಿ ರುಪಾಯಿಗೆ ಏರಿಕೆಯಾಗಿದೆ.
2020ರ ಜೂನ್ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳ ಆದಾಯವು ವರ್ಷದಿಂದ ವರ್ಷಕ್ಕೆ ಶೇ. 26.7ರಷ್ಟು ಏರಿಕೆಯಾಗಿ 3,420.67 ಕೋಟಿ ರುಪಾಯಿಯಷ್ಟಿದೆ. ಜೂನ್ ತ್ರೈಮಾಸಿಕದಲ್ಲಿ ಬ್ರಿಟಾನಿಯಾದ ದೇಶೀಯ ಪ್ರಮಾಣದ ಬೆಳವಣೆಗೆ ಶೇಕಡ 22ರಷ್ಟಕ್ಕೇರಿದ್ದು 2019ರ ಜೂನ್ ತ್ರೈಮಾಸಿಕದಲ್ಲಿ ಕೇವಲ ಶೇಕಡ 3ರಷ್ಟಿತ್ತು.
ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯ (ಇಬಿಐಟಿಡಿಎ) ಗೆ ಮುಂಚಿನ ಏಕೀಕೃತ ಆದಾಯವು ವರ್ಷದಿಂದ ವರ್ಷಕ್ಕೆ ಶೇ 81.6 ರಷ್ಟು ಏರಿಕೆಯಾಗಿ 717 ಕೋಟಿ ರೂ.ಗೆ ತಲುಪಿದೆ. 2020ರ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ 640 ಬಿಪಿಎಸ್ ಯೊವೈ ಅನ್ನು 21 ಶೇಕಡಾಕ್ಕೆ ವಿಸ್ತರಿಸಿದೆ.
Follow us on Social media