ಮಧ್ಯ ಪ್ರದೇಶ: ಬೆಳೆ ನಾಶಪಡಿಸಲು ಬಂದ ಕಂದಾಯ ಅಧಿಕಾರಿಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದ ಕೃಷಿಕ ದಂಪತಿಗಳ ಮೇಲೆ ಪೊಲೀಸರು ಅಮಾನುಷ ರೀತಿಯಲ್ಲಿ ಹಲ್ಲೆ ನಡೆಸುವ ವಿಡಿಯೋವೊಂದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಟ್ವಿಟ್ ಮಾಡಿದ್ದು, ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ರೀತಿಯ ಮಾನಸ್ಥಿತಿ ಹಾಗೂ ಅನ್ಯಾಯದ ವಿರುದ್ಧ ಎಂದು ನಮ್ಮ ಹೋರಾಟ ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.ಇದು ಮಾರ್ಚ್ ತಿಂಗಳಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜ್ಯೋತಿರಾಧಿತ್ಯ ಸಿಂಧಿಯಾ ಪ್ರಾಬಲ್ಯದ ಗುನಾದಲ್ಲಿ ನಡೆದಿರುವ ಘಟನೆ ಆಗಿದೆ.
ಭೂಮಿ ಸರ್ಕಾರಕ್ಕೆ ಸೇರಿದ್ದು ಎಂದು ಕಂದಾಯ ಅಧಿಕಾರಿಗಳು ಬೆಳೆ ನಾಶಪಡಿಸಲು ಪ್ರಯತ್ನಿಸುತ್ತಿದ್ದಾಗ ರೈತ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುವ ದೃಶ್ಯ ವಿಡಿಯೋದಲ್ಲಿದೆ.
ಕೃಷಿ ಭೂಮಿಯಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಪೊಲೀಸರು ರೈತನನ್ನು ಧರ ಧರನೆ ಎಳೆದೊಯ್ದು ಹಲ್ಲೆ ನಡೆಸುತ್ತಾರೆ. ಅಲ್ಲಿದ್ದ ಮಕ್ಕಳು ಚೀರಾಡುತ್ತಾ ತಮ್ಮ ಪೋಷಕರನ್ನು ಅಪ್ಪಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಅವರನ್ನು ಕೂಡಾ ಪೊಲೀಸರು ಬಲವಾಗಿ ನೂಕುವುದು ವಿಡಿಯೋದಲ್ಲಿದೆ.
Follow us on Social media