ಬೆಳಗಾವಿ: ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಮಿಷನ್ 2023ನ್ನು ಆರಂಭಿಸಲಾಗಿದೆ. ಕಾರ್ಯಕರ್ತರು ಪಕ್ಷದ ನಾಯಕರಿಗೆ ಪದೇ ಪದೇ ನೆನಪು ಮಾಡುವ ದೃಷ್ಠಿಯಿಂದಲೇ ತಮ್ಮ ಕಾರಿನ ಸಂಖ್ಯೆಯನ್ನು 2023 ಇಡಲಾಗಿದೆ. ಇದು ತಾವು ಮುಖ್ಯಮಂತ್ರಿ ಆಗಲು ಇಟ್ಟಿರುವ ಟಾರ್ಗೆಟ್ ಅಲ್ಲ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಟಾರ್ಗೆಟ್ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದಾಶಿವನಗರದ ಸ್ಮಶಾನದಲ್ಲಿ ಸತೀಶ್ ಜಾರಕಿಹೊಳಿ ಖರೀದಿಸಿರುವ ನೂತನ ಕಾರಿಗೆ ಸ್ಮಶಾನ ದಲ್ಲಿ ಪೂಜೆ ನೆರವೇರಿಸುವ ಮೂಲಕ ಮೂಢನಂಬಿಕೆ ವಿರುದ್ಧ ಹೋರಾಟವನ್ನು ಮುಂದುವರೆಸಿದ್ದಾರೆ.
ಕಾರನ್ನು ಚಲಾಯಿಸಿ ಮಾತನಾಡಿದವ ಅವರು, ಸ್ಮಶಾನದ ಬಗ್ಗೆ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆ ಗಳು ಇವೆ, ಸ್ಮಶಾನ ಎಂದರೆ ಅಶುಭ ಎನ್ನುವ ಭಾವನೆ ಇದೆ. ಅದನ್ನು ಹೋಗಲಾಡಿ ಸಲು ಸ್ಮಶಾನದಲ್ಲಿ ಹೊಸ ಕಾರಿನ ಚಾಲನೆ ನೀಡಲಾಗಿದೆ.
ನಮ್ಮ ಕುಟುಂಬದಲ್ಲಿಯೂ ಪಂಚಾಂಗ ನೋಡುವರು ಇದ್ದಾರೆ. ಆದರೆ ನಾನೊಬ್ಬನೇ ವಿಭಿನ್ನ.ಮೊದಲು ನಾನೊಬ್ಬನೇ ಹೋರಾಟ ಆರಂಭಿಸಿದೆ ಸದ್ಯ ನನ್ನ ಜತೆಗೆ ಅನೇಕ ಮಠಾಧೀಶರು ಹಾಗೂ ಜನ ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದರು.
Follow us on Social media