ನವದೆಹಲಿ: ಭಾರತದ ಡಿಜಿಟಲೀಕರಣಕ್ಕಾಗಿ ಬರೋಬ್ಬರಿ 75 ಸಾವಿರ ಕೋಟಿ ರುಪಾಯಿಯನ್ನು ಹೂಡಿಕೆ ಮಾಡುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ಅಭಿವೃದ್ಧಿಗಾಗಿ ಮುಂದಿನ 5-7 ವರ್ಷಗಳ ಕಾಲ ಭಾರತದಲ್ಲಿ 75 ಸಾವಿರ ಕೋಟಿ ರುಪಾಯಿಯನ್ನು ಗೂಗಲ್ ಹೂಡಿಕೆ ಮಾಡಲಿದೆ.
ನಾವು ಭಾರತದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸಲು ಸಹಾಯ ಮಾಡಲು 10 ಬಿಲಿಯನ್ ಡಾಲರ್ ಡಿಜಿಟಲೀಕರಣ ನಿಧಿಯನ್ನು ಘೋಷಿಸಿದ್ದೇವೆ. ಡಿಜಿಟಲ್ ಇಂಡಿಯಾಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಬೆಂಬಲಿಸುವುದಕ್ಕೆ ಹೆಮ್ಮೆಪಡುತ್ತೇವೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಗೂಗಲ್ ಸಂಸ್ಧೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಜೊತೆ ವರ್ಚುವಲ್ ಸಂವಾದ ನಡೆಸಿದ್ದರು. ಭಾರತೀಯ ರೈತರು ಹಾಗೂ ಯುವ ಸಮುದಾಯದ ಬದುಕನ್ನು ಬದಲಿಸಲು ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಸುಂದರ್ ಪಿಚೈ ಅವರ ಜೊತೆಗಿನ ಸಂವಾದದ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು.
