ಕಾರ್ಕಳ : ಕಲ್ಯಾ ಕುಂಟಾಡಿಯ ಅಪ್ರಾಪ್ತ ಚಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ಬಂಧಿಸಿದ್ದಾರೆ.
ಮೂಡಬಿದ್ರಿಯ ಪ್ರಕಾಶ್ ಶೆಟ್ಟಿ ಹಾಗೂ ನಿಟ್ಟೆ ಕೆಮ್ಮಣ್ಣು ನಿವಾಸಿ ಪ್ರದೀಪ್ ಆಚಾರಿ ಪ್ರಕರಣದ ಆರೋಪಿಗಳಾಗಿದ್ದಾರೆ. ಮೂಡಬಿದ್ರಿಯ ಪ್ರೆಶರ್ ಒಂದರಲ್ಲಿ ಇರುವ ತನ್ನ ಮನೆಗೆ ಅಪ್ರಾಪ್ತ ಬಾಲಕಿಯನ್ನು ರಾತ್ರಿ ವೇಳೆಗೆ ಇತರರು ಯಾರೂ ಇಲ್ಲದ ಸಮಯದಲ್ಲಿ ಕರೆ ತಂದು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ. ಅಪ್ರಾಪ್ತ ಬಾಲಕಿ ಆರೋಪಿಯ ರಕ್ತಸಂಬಂಧಿಯೂ ಆಗಿದ್ದಾನೆ.
2ನೇ ಆರೋಪಿ ಪ್ರದೀಪ್ ಆಚಾರಿ ಅದೇ ಅಪ್ರಾಪ್ತ ಬಾಲಕಿಯನ್ನು 2019 ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಎಂಬಲ್ಲಿನ ತನ್ನ ಮನೆಯ ಬಳಿಯ ಹಾಡಿಗೆ ತನ್ನ ರಿಕ್ಷಾದಲ್ಲಿ ಪುಸಲಾಯಿಸಿ ಕರೆತಂದು ಒಟ್ಟು ಮೂರು ಬಾರಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಇಬ್ಬರು ಯುವಕರ ಪಿಶಾಚಿ ಕೃತ್ಯದಿಂದಾಗಿ ಅಪ್ರಾಪ್ತ ಬಾಲಕಿ ಗರ್ಭವತಿಯಾಗಿದ್ದಾಳೆ.
ಈ ಕುರಿತು ಆಕೆಯ ತಾಯಿ ನೀಡಿದ ದೂರಿನ್ವಯ ಆರೋಪಿಗಳ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿತ್ತು.
Follow us on Social media