ಮುಂಬೈ: ದೇವನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್(ಡಿಎಚ್ಎಫ್ಎಲ್)ನಿಂದ ರಿಸರ್ವ್ ಬ್ಯಾಂಕಿಗೆ ಒಟ್ಟು 3 ಸಾವಿರದ 688.58 ಕೋಟಿ ರೂಪಾಯಿ ಅನುತ್ಪಾದಕ ಆಸ್ತಿ(ಎನ್ ಪಿಎ) ಮೊತ್ತ ವಂಚನೆಯಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.
ಫೈನಾನ್ಸ್ ಕಂಪೆನಿಯು ಪಡೆದ ಒಟ್ಟು 97 ಸಾವಿರ ಕೋಟಿ ರೂಪಾಯಿಗಳ ಬ್ಯಾಂಕ್ ಸಾಲಗಳಲ್ಲಿ 31 ಸಾವಿರ ಕೋಟಿ ರೂಪಾಯಿಗಳನ್ನು ವಂಚಿಸಿದೆ ಎಂದು ವರದಿಯಲ್ಲಿ ಹೇಳಿದೆ.
ಕಂಪೆನಿ ಕಡೆಯಿಂದ ಬ್ಯಾಂಕಿಗೆ 3 ಸಾವಿರದ 688 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಆರ್ ಬಿಐಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ ಎಂದು ಷೇರು ವಿನಿಮಯ ಸಲ್ಲಿಕೆ ವೇಳೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಡಿಎಚ್ ಎಲ್ ಎಫ್ ನಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದ ನಂತರ ರಿಸರ್ವ್ ಬ್ಯಾಂಕ್ ಡಿಎಚ್ಎಲ್ಎಫ್ ಗೆ ದಿವಾಳಿತನ ನಿಯಮದಡಿ ನೊಟೀಸ್ ಕಳುಹಿಸಿತ್ತು. ಎಸ್ಎಫ್ಐಒ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಡಿಎಚ್ಎಲ್ಎಫ್ ವಿರುದ್ಧ ತನಿಖೆ ಆರಂಭಿಸಿದ್ದವು.
Follow us on Social media