ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಳೆದೊಂದು ವಾರದಿಂದ ನೂರರ ಗಡಿ ದಾಟಿ ಮುನ್ನುಗ್ಗುತ್ತಿದ್ದು ಇಂದು ಒಂದೇ ದಿನದಲ್ಲಿ 200ರ ಸನಿಹಕ್ಕೆ ಕಾಲಿಟ್ಟಿದೆ. ದಾಖಲೆಯ 183 ಮಂದಿ ಸೋಂಕಿತರು ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿರುವ ಮಾಹಿತಿಯಿದ್ದು ಅವರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕ, ಮಹಾರಾಷ್ಟ್ರ, ದುಬೈ ಮೂಲದಿಂದ ಸೋಂಕು ಹರಡಿದ್ದು ಇನ್ನೂ ಕೆಲವರಿಗೆ ಜ್ವರ, ಉಸಿರಾಟದ ತೊಂದರೆ ಇರುವವರಲ್ಲಿಯೂ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಇಂದು ಮುಂಜಾನೆ ಮೂರು ಮಂದಿ ಸೋಂಕಿತರು ಸಾವನ್ನಪ್ಪಿದ್ದರೆ 10 ಮಂದಿ ಇನ್ನೂ ಐಸಿಯುನಲ್ಲಿ ಇದ್ದಾರೆ ಎಂದು ಹೇಳಲಾಗಿದೆ.
Follow us on Social media