Breaking News

ಬೇಡ-ಬೇಡವೆಂದರೂ ಹಾರ, ಶಾಲು ಹಾಕುತ್ತಾರೆ; ನಮ್ಮ ಯಾತನೆ ಕೇಳುವವರು ಯಾರು?: ರಾಜಕಾರಣಿಗಳ ಅಳಲು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕರು, ಸಚಿವರು ಸೇರಿದಂತೆ ಎಲ್ಲಾ  ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೋವಿದ್ ಪರೀಕ್ಷೆಗಾಗಿ ಮುಗಿ ಬೀಳುತ್ತಿದ್ದಾರೆ.

ರಾಜಕಾರಣಿಗಳು ಹೆಚ್ಚಿನ ಪ್ರಮಾಣದಲ್ಲಿ  ಜನರನ್ನು ಭೇಟಿ ಮಾಡುವ ಕಾರಣದಿಂದಾಗಿ ಅವರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆಯಿದೆ, ಏಕೆಂದರೇ ಅವರು ವರ್ಕ್ ಫ್ರಮ್ ಹೋಮ್ ಮಾಡಲಾಗುವುದಿಲ್ಲ.

ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಮಾಜಿ ಎಂಎಲ್ ಸಿ ಪುಟ್ಟಣ್ಣ, ಕುಣಿಗಲ್ ಶಾಸಕ ಎಚ್ ಡಿ ರಂಗನಾಥ್, ಎಂಕೆ ಪ್ರಾಣೇಶ್, ಜನಾರ್ದನ ಪೂಜಾರಿ ಸೇರಿ ಹಲವು ರಾಜಕಾರಣಿಗಳು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ.

ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಿಲ್ಲ, ಆ ನಿಯಮವನ್ನು ಅವರು ಪಾಲಿಸುವುದಿಲ್ಲ, ಎಷ್ಟು ಹೇಳಿದರೂ ಅರ್ಥ ಮಾಡಿಕೊಳ್ಳದೇ ಸೆಲ್ಫೀ ತೆಗೆದುಕೊಳ್ಳುವುದು, ಸಾಲು ಹೊದಿಸುವುದು ಹಾರ ಹಾಕುತ್ತಾರೆ, ಅವರಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತದೆ ಎಂದು ಸಂಸದ ಸುಮಲತಾ ಅಂಬರೀಷ್ ತಿಳಿಸಿದ್ದಾರೆ,

ರಾಜಕಾರಣಿಗಳು ದಿನಕ್ಕೆ ಹಲವು ಮಂದಿಯನ್ನು ಭೇಟಿ ಮಾಡುತ್ತಾರೆ, ಬರುವಾಗ ಜನರು ಹಾರ, ಮೈಸೂರು ಪೇಟ, ಹಣ್ಣು ಹೂವು, ಪ್ರಸಾದ ತೀರ್ಥ ಮತ್ತು ಉಡುಗೊರೆಗಳನ್ನು ತರುತ್ತಾರೆ.

ಪ್ರತಿದಿನ ಮದುವೆ, ಗೃಹ ಪ್ರವೇಶ, ನಾಮಕರಣ ಮುಂತಾದ ಸಮಾರಂಭಗಳಿರುತ್ತವೆ ಜೊತೆಗೆ ಹಲವು ಅನೇಕ ಶಾಸಕಾಂಗ ಉಪಸಮಿತಿಗಳ ಸಭೆಗಳಿರುತ್ತವೆ, ಅವುಗಳಲ್ಲಿ ಭಾಗವಹಿಸಬೇಕು, ಹಾಗೂ ಹಾರ ಮತ್ತು ಶಾಲುಗಳನ್ನು ತರಬೇಡಿ ಎಂದು ಅವರು ಕೇಳುವುದಿಲ್ಲ ಎಂದು ಬಿಜೆಪಿ ಎಂಎಲ್ ಸಿ ರವಿ ಕುಮಾರ್ ಹೇಳಿದ್ದಾರೆ.

ಇನ್ನೂ ಶಾಸಕ ಯತೀಂದ್ರ ಸಿದ್ದರಾಮಯ್ಯತಮ್ಮ ಕ್ಷೇತ್ರದಲ್ಲಿನ ಹಲವು ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದೆ, ಅಲ್ಲಿಯ ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿ ಹೇಳುವಷ್ಟರಲ್ಲಿ ಸಾಕಾಗಿ ಹೋಯಿತು ಎಂದು ಹೇಳಿದ್ದಾರೆ.

ಕೊರೋನಾ ಸೂಕ್ಷ್ಮತೆಯನ್ನು ಅರಿತು ರಾಜಕಾರಣಿಗಳು ತಮ್ಮ ದೈನಂದಿನ ದಿನಚರಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಬಿಎಲ್ ಶಂಕರ್ ಹೇಳಿದ್ದಾರೆ. ಶಾಸಕ ದಿನೇಶ್ ಗುಂಡೂರಾವ್ ಅವರ ಪಿಎ ಮತ್ತ ಅವರ ಸಹಾಯಕರಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×