ನವದೆಹಲಿ : ಕೊರೊನಾ ಕಾರಣದಿಂದಾಗಿ ನಡೆಸಲಾಗದೆ ಬಾಕಿ ಉಳಿದ ಪದವಿ ಕೋರ್ಸ್ಗಳ ಅಂತಿಮ ಸೆಮಿಸ್ಟರ್ನ ಪರೀಕ್ಷೆಯನ್ನು ಸೆಪ್ಟೆಂಬರ್ ಕೊನೆಯೊಳಗೆ ನಡೆಸಬೇಕು ಎಂದು ಎಲ್ಲ ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚಿಸಿದೆ.
ಇನ್ನು ಈ ಪರೀಕ್ಷೆಯು 2019–20ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ. ಹಾಗೆಯೇ ಒಂದು ಬಾರಿಗೆ ಮಾತ್ರ ನೀಡಲಾಗುವ ಅವಕಾಶ ಎಂದೂ ಕೂಡಾ ಯುಜಿಸಿ ತಿಳಿಸಿದೆ.
ಹಾಗೆಯೇ ಈ ಪರೀಕ್ಷೆಯನ್ನು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅಥವಾ ಎರಡೂ ವ್ಯವಸ್ಥೆಗಳಲ್ಲೂ ನಡೆಸಬಹುದು ಎಂದು ಹೇಳಿದೆ.
ಕೊರೊನಾ ನಿಯಂತ್ರಣಕ್ಕಾಗಿ ಮಾರ್ಚ್ನಲ್ಲಿ ಹೇರಲಾದ ಲಾಕ್ಡೌನ್ ಕಾರಣದಿಂದ ಯುಜಿಸಿಯು ಹಲವು ಪರೀಕ್ಷೆಗಳನ್ನು ರದ್ದು ಮಾಡಿತ್ತು. ಈಗ ಬಾಕಿ ಉಳಿದ ಪದವಿ ಕೋರ್ಸ್ಗಳ ಅಂತಿಮ ಸೆಮಿಸ್ಟರ್ನ ಪರೀಕ್ಷೆಯನ್ನು ಸೆಪ್ಟೆಂಬರ್ನ ಒಳಗಾಗಿ ನಡೆಸಲು ಯುಜಿಸಿ ಸೂಚಿಸಿದೆ.
ಇನ್ನು ಯುಜಿಸಿಯು ಈ ಸೂಚನೆ ನೀಡುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಕಡೆಗಣಿಸಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಬೋಧಕರ ಸಂಘಟನೆ(ಡುಟಾ) ಆರೋಪ ಮಾಡಿದೆ.
Follow us on Social media