ಮೂಲ್ಕಿ: ಪಕ್ಕದ ಮನೆಯನ್ನೇ ದೋಚಿದ ಇಬ್ಬರು ಖದೀಮರನ್ನು ಮೂಲ್ಕಿ ಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ರಾವ್.ನಗರದ ಲಿಂಗಪ್ಪಯ್ಯಕಾಡು ನಿವಾಸಿ ಕಲ್ಲಪ್ಪ ಎಂಬವರು ತಮ್ಮ ಮನೆಯ ಹಿಂದಿನ ಬಾಗಿಲಿನ ಮೂಲಕ ಪ್ರವೇಶಿಸಿ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದರು.
ತಕ್ಷಣ ಮೂಲ್ಕಿ ಪೊಲೀಸರ ಕಾರ್ಯಾಚರಣೆ ನಡೆಸಿದಾಗ ಪಕ್ಕದ ಮನೆಯವರಾದ ಮೋಹನ್ರಾಜ್ (20) ಮತ್ತು ಮಂಜುನಾಥ ಮಾಳಗಿ (39) ಅವರನ್ನು ವಿಚಾರಣೆ ನಡೆಸಿದಾಗ ಕಳವು ಕೃತ್ಯ ನಡೆಸಿರುವುದು ಗೊತ್ತಾಗಿದೆ. ಆರೋಪಿಗಳಿಂದ 36 ಗ್ರಾಂ ತೂಕದ 1.60 ಲಕ್ಷರೂ. ವೆಚ್ಚದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ.
ಮೂಲ್ಕಿ ಪೊಲೀಸರ ಕಾರ್ಯಾಚರಣೆಗೆ ಮಂಗಳೂರಿನ ಆಯುಕ್ತರಾದ ವಿಕಾಸ್ಕುಮಾರ್ ವಿಕಾಶ್ ಅವರು ಅಭಿನಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಜಯರಾಂ ಗೌಡ, ಸಬ್ ಇನ್ಸ್ಪೆಕ್ಟರ್ ಶೀತಲ್ ಅಲಗೂರ ಹಾಗೂ ದೇಜಪ್ಪ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
Follow us on Social media