ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ಮಹಾಮಾರಿ ಸಾವಿರದ ಗಡಿ ದಾಟಿದ್ದು, ಇಂದು 1,105 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,295ಕ್ಕೇರಿಕೆಯಾಗಿದೆ. ಇಂದು ಒಟ್ಟು 19 ಮಂದಿ ಕೊರೊನಾಗೆ ಸಾವನ್ನಪ್ಪಿದ್ದು, ಬಲಿಯಾದವರ ಸಂಖ್ಯೆ 226ಕ್ಕೆ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಇಂದು ಕೊರೊನಾ ಶರವೇಗ ಮುಂದುವರಿದಿದ್ದು, ಇಂದು 738 ಹೊಸ ಪ್ರಕರಣಗಳು ವರದಿ ಆಗಿದೆ. ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 4052 ಆಗಿದ್ದು, 3427 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾದಿಂದ ಗುಣಮುಖರಾಗಿ 533 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 91 ಮಂದಿಗೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಇಂದಿನ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 738, ಬಳ್ಳಾರಿ 76, ದಕ್ಷಿಣ ಕನ್ನಡ 32, ಬೀದರ್ 28, ಉತ್ತರ ಕನ್ನಡ 24, ಕಲಬುರಗಿ 23, ಹಾಸನ 22, ವಿಜಯಪುರ 22, ತುಮಕೂರು 18, ಉಡುಪಿ 18, ಧಾರವಾಡ 17, ಚಿಕ್ಕಮಗಳೂರು 17, ಚಿಕ್ಕಬಳ್ಳಾಪುರ 15, ಯಾದಗಿರಿ 9, ಮಂಡ್ಯ 8, ಮೈಸೂರು 6, ಶಿವಮೊಗ್ಗ 5, ರಾಯಚೂರು 4, ಬಾಗಲಕೋಟೆ 4, ಗದಗ 4, ಕೋಲಾರ 4, ಬೆಂಗಳೂರು ಗ್ರಾಮಾಂತರ 3, ದಾವಣಗೆರೆ, ರಾಮನಗರ, ಚಿತ್ರದುರ್ಗ ತಲಾ 2 ಮತ್ತು ಹಾವೇರಿ ಹಾಗೂ ಕೊಡಗು ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿವೆ.
Follow us on Social media