ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ನಡೆದ ಅಮಾನವೀಯ ಘಟನೆಯೊಂದರಲ್ಲಿ ಮಗನೊಬ್ಬ ಲಾಡ್ಜ್‌ನಲ್ಲಿ ತಂಗಿದ್ದ ತಂದೆಯನ್ನು ಮೊದಲ ಮಹಡಿಯಿಂದ ಕಾಲುಗಳನ್ನು ಹಿಡಿದು ದರದರನೆ ನೆಲಮಹಡಿಯವರೆಗೆ ಎಳೆದೊಯ್ದಿದ್ದಾನೆ. ಮಂಗಳೂರು ದೇರಳಕಟ್ಟೆ ಖಾಸಗಿ ಲಾಡ್ಜ್‌ನಲ್ಲಿ ಜೂನ್ 29 ರ ಸೋಮವಾರ ಈ ಘಟನೆ ನಡೆದಿದೆ.
15 ದಿನಗಳ ಹಿಂದೆ ಮುಂಬೈನಿಂದ ಮಂಗಳೂರಿಗೆ ಬಂದಿದ್ದರಿಂದ ತಂದೆ ಖಾಸಗಿ ಲಾಡ್ಜ್‌ನಲ್ಲಿದ್ದರು. ಅವರಿಗೆ ಲಾಡ್ಜ್‌ಗೆ ತೆರಳುವ ಮುನ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ತಂದೆ ಮತ್ತು ಮಗ ಇಬ್ಬರೂ ಉಪ್ಪಳ ಮೂಲದವರು ಮತ್ತು ಮಗನ ಅಮಾನವೀಯ ಕ್ರಿಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು ಸ್ಥಳೀಯರೂ ಕೂಡ ಈ ಕೃತ್ಯಕ್ಕೆ ತಡೆಯೊಡ್ಡಲಿಲ್ಲ ಎನ್ನುವುದು ಖೇದದ ಸಂಗತಿ.
ಘಟನೆಯ ನಂತರ ಮಗ ನಾಪತ್ತೆಯಾಗಿದ್ದಾಗಿ ವರದಿಯಾಗಿದೆ. ಸಾರ್ವಜನಿಕರು ಪ್ರಥಮ ಚಿಕಿತ್ಸೆ ನೀಡುವ ಮೂಲಕ ನೊಂದ ತಂದೆಗೆ ಸಹಾಯ ಮಾಡಿದರು.
Follow us on Social media