ಕೊಣಾಜೆ : ಕಾರು ಡಿಕ್ಕಿಯಾಗಿ ಕಾರಿನಡಿಗೆ ಬಿದ್ದ ಮೂರು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಣಾಜೆ ಸಮೀಪದ ನಡುಪದವು ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಗುವನ್ನು ನಡುಪದವಿನ ಫಾರೂಕ್ ಎಂಬವರ ಮೂರು ವರ್ಷದ ಮಗು ಫಾಹಿಮಾ ಎಂದು ಗುರುತಿಸಲಾಗಿದೆ.
ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಕಾರು ಬರುತ್ತಿದ್ದ ಸಂದರ್ಭದಲ್ಲಿ ರಸ್ತೆಯ ಸಮೀಪದಲ್ಲಿದ್ದ ಮನೆಯ ಮಗು ರಸ್ತೆಗೆ ಬಂದಿದ್ದು ಕಾರು ಡಿಕ್ಕಿಯಾಗಿ ಸಾವನ್ನಪ್ಪಿದೆ ಎನ್ನಲಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ನಿರೀಕ್ಷಿಸಲಾಗಿದೆ.
Follow us on Social media