ಉಡುಪಿ: ತಮ್ಮ ಪ್ರಾಥಮಿಕ ಸಂಪರ್ಕಗಳನ್ನು ಬಹಿರಂಗಪಡಿಸದ ಮತ್ತು ಪ್ರಯಾಣದ ಇತಿಹಾಸವನ್ನು ಮರೆಮಾಚಿದ್ದ ಇಬ್ಬರು ಕೊವಿಡ್ ಸೋಂಕಿತರ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಡುಬಿದ್ರಿಯ ಹೆಜಾಮಾಡಿಯ ಇಬ್ಬರಿಗೆ ಕೊವಿಡ್ ಸೋಂಕು ದೃಢಪಟ್ಟಿತ್ತು. ಆಸ್ಪತ್ರೆಗೆ ದಾಖಲಿಸಿದ ನಂತರ, ಅಧಿಕಾರಿಗಳು ಪ್ರಾಥಮಿಕ ಸಂಪರ್ಕಗಳು ಮತ್ತು ಪ್ರಯಾಣದ ಇತಿಹಾಸದ ಬಗ್ಗೆ ಕೇಳಿದಾಗ ಸೋಂಕಿತರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಅಧಿಕಾರಿಗಳು ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದಾಗ ಇವರಿಬ್ಬರೂ ದಕ್ಷಿಣ ಕನ್ನಡದ ಬಂಟ್ವಾಳ, ಕಾಸರಗೋಡು, ಉಲ್ಲಾಳ ಮತ್ತು ಇತರ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದರು.
Follow us on Social media