ಮೈಸೂರು: ಮತ್ತೊಮ್ಮೆ ಲಾಕ್‌ಡೌನ್ ಬೇಡ ಎಂದಿರುವ ಸಂಸದ ಪ್ರತಾಪ್‌ಸಿಂಹ, ಎಷ್ಟು ದಿನ ಅಂತ ಜನರನ್ನು ಮನೆಯಲ್ಲಿ ಕೂರಿಸುತ್ತೀರಾ? ಜೀವ ಉಳಿಸೋಕೆ ಹೋಗಿ ಜೀವನ ಹಾಳಾಗಬಾರದು. ಪರಿಸ್ಥಿತಿ ಸರ್ಕಾರದ ನಿಯಂತ್ರಣದಲ್ಲಿದೆ. ಸುಮ್ಮನೆ ಪ್ಯಾನಿಕ್ ಕ್ರಿಯೇಟ್ ಮಾಡುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಅಂತ ನನಗೆ ಅನ್ನಿಸುತ್ತದೆ. ಸರ್ಕಾರ ಅಂದ ಮೇಲೆ ಜೀವ-ಜೀವನ ಎರಡನ್ನೂ ಉಳಿಸಬೇಕು. ಭಾರತದಲ್ಲಿ ಲಕ್ಷಗಟ್ಟಲೇ ಜನ ಸಾಯ್ತಾರೆ ಎಂದು ತಜ್ಞರು ಹೇಳಿದ್ದರು. ಹಾಗೇನಾದ್ರು ಆಯ್ತಾ? ಈಗಲೂ ಅಷ್ಟೆ, ಏನೂ ಆಗಲ್ಲ ಎಂದು ಸಮರ್ಥಿಸಿಕೊಂಡರು.
ಕರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಮೋದಿ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡುವಾಗ ಇದನ್ನೆಲ್ಲ ಯೋಚನೆ ಮಾಡಿದೆ. ಮುಂಬೈ ಮತ್ತು ದೆಹಲಿಗೂ- ಬೆಂಗಳೂರಿಗೂ ವ್ಯತ್ಯಾಸ ಇದೆ.
ಅಲ್ಲಿನ ಪರಿಸ್ಥಿತಿಗೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸ ಇದೆ. ಬೆಂಗಳೂರಿನಲ್ಲಿ ಕಡಿಮೆ ಆ್ಯಕ್ಟೀವ್ ಕೇಸ್ ಇದೆ. ಹಾಗಾಗಿ ಮತ್ತೆ ಲಾಕ್‌ಡೌನ್ ಎನ್ನುವ ಅನಿವಾರ್ಯತೆ ಇಲ್ಲ ಎಂದು ಹೇಳಿದರು.
ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ, ಬೆಂಗಳೂರಿನಲ್ಲಿ 20 ದಿನ ಸಂಪೂರ್ಣ ಲಾಕ್‌ಡೌನ್ ಮಾಡಬೇಕು. ಹಣಕ್ಕಿಂತ ಜನರ ಪ್ರಾಣ ಮುಖ್ಯ ಎಂದು ಆಗ್ರಹಿಸಿದ್ದರು. ಅಲ್ಲದೆ, ದೇಶದಾದ್ಯಂತ 20 ಮತ್ತೊಮ್ಮೆ ಲಾಕ್‌ಡೌನ್ ಮಾಡುವುದು ಒಲಿತು ಎಂದು ಪ್ರಧಾನಿ ಮೋದಿ ಅವರಿಗೂ ಟ್ವೀಟ್ ಮೂಲಕ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ, ಲಾಕ್‌ಡೌನ್ ಅಗತ್ಯವಿಲ್ಲ ಎಂದಿದ್ದಾರೆ
Follow us on Social media