ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 249 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಮತ್ತೆ ಐವರು ಮೃತಪಟ್ಟಿದ್ದಾರೆ.
ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9399ಕ್ಕೇರಿಕೆಯಾಗಿದ್ದು, 146 ಮಂದಿ ಮೃತಪಟ್ಟಿದ್ದಾರೆ. 5730 ಮಂದಿ ಗುಣಮುಖರಾಗಿದ್ದು, 3523 ಸಕ್ರಿಯ ಪ್ರಕರಣಗಳಿದ್ದು, 80 ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
249 ಸೋಂಕಿತರ ಪೈಕಿ 50 ಮಂದಿ ಅಂತಾರಾಜ್ಯ ಮತ್ತು 11 ಮಂದಿ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ.
ಬೆಂಗಳೂರು ನಗರದಲ್ಲಿ 126, ಕಲಬುರಗಿಯಲ್ಲಿ 27, ವಿಜಯಪುರದಲ್ಲಿ 15, ಉಡುಪಿಯಲ್ಲಿ 14, ದಕ್ಷಿಣ ಕನ್ನಡದಲ್ಲಿ 12, ದಾವಣಗೆರೆಯಲ್ಲಿ 9, ಉತ್ತರಕನ್ನಡ, ಬಾಗಲಕೋಟೆಯಲ್ಲಿ ತಲಾ 6, ಬೀದರ್, ಚಿಕ್ಕಮಗಳೂರಿನಲ್ಲಿ ತಲಾ 5, ಧಾರವಾಡ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4, ರಾಮನಗರದಲ್ಲಿ ತಲಾ 3, ಚಿತ್ರದುರ್ಗ, ಕೋಲಾರ, ತುಮಕೂರು, ಕೊಡಗಿನಲ್ಲಿ ತಲಾ 2, ಯಾದಗಿರಿ, ಮೈಸೂರು, ಚಿಕ್ಕಬಳ್ಳಾಪುರ, ಗದಗ ಮತ್ತು ಕೊಪ್ಪಳದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ.
ಬಳ್ಳಾರಿಯ 60 ವರ್ಷದ ಮಹಿಳೆ, ರಾಮನಗರದ 90 ವರ್ಷದ ವೃದ್ಧ, ಬೆಂಗಳೂರು ನಗರದ 45 ಮತ್ತು 70 ವರ್ಷದ ವ್ಯಕ್ತಿಗಳು ಮತ್ತು 38 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Follow us on Social media