ನವದೆಹಲಿ: ಇದೇ ಜೂನ್.21ರ ಭಾನುವಾರ ಅಪರೂಪದ ಕಂಕಣ ಸೂರ್ಯಗ್ರಹಣ ಹಾಗೂ ಪಾರ್ಶ್ವ ಸೂರ್ಯಗ್ರಹಣ ಸುಮಾರು ಮೂರೂವರೆ ಗಂಟೆಗಳ ಕಾಲ ಸಂಭವಿಸಲಿದ್ದು, ನಭೋಮಂಡಲದಲ್ಲಿ ಸೃಷ್ಟಿಯಾಗಲಿರುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ.
ಭಾರತ, ಆಫ್ರಿಕಾ, ಚೀನಾ, ಯುರೋಪ್, ಆಸ್ಟ್ರೇಲಿಯಾಗಳಲ್ಲಿ ಗ್ರಹಣ ಗೋಚರಿಸಲಿದ್ದು, ಸೂರ್ಯನು ಗ್ರಹಣದ ಸಂದರ್ಭದಲ್ಲಿ ಭಾರತದ ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಹಲವು ಭಾಗಗಳಲ್ಲಿ ಕಂಕಣಾಕೃತಿಯಲ್ಲಿ ಕಾಣಲಿದ್ದಾನೆ.
ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಗೋಚರಿಸಲಿದೆ. ಸೂರ್ಯ-ಭೂಮಿ ನಡುವೆ ಚಂದ್ರನು ನೇರ ರೇಖೆಯಲ್ಲಿ ಹಾದು ಹೋಗದಿದ್ದಾಗ ಪಾರ್ಶ್ವ ಸೂರ್ಯಗ್ರಹಣ ಸಂಭವಿಸುತ್ತದೆ.
ಬೆಂಗಳೂರಿನಲ್ಲಿ ಪಾರ್ಶ್ವ ಸೂರ್ಯಗ್ರಹಣ ಬೆಳಿಗ್ಗೆ 10.13ಕ್ಕೆ ಆರಂಬವಾಗಿ ಮಧ್ಯಾಹ್ನ 1.32ಕ್ಕೆ ಮೋಕ್ಷವಾಗುತ್ತದೆ. ಮೈಸೂರಿನಲ್ಲಿ ಬೆಳಿಗ್ಗೆ 10.10ರಿಂದ 1.26ರವರೆಗೆ ಧಾರವಾಡದಲ್ಲಿ 10.04ರಿಂದ 1.28ರವರೆಗೆ, ಬೆಳಗಾವಿಯಲ್ಲಿ 10.03ರಿಂದ 1.27ರವರೆಗೆ, ಕಲಬುರಗಿಯಲ್ಲಿ 10.09ರಿಂದ 1.38ರವರೆಗೆ ಕಾಣಲಿದೆ.
Follow us on Social media