ಮಂಗಳೂರು : ಲಾರಿಯೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದು ತಂದೆ – ಮಗುವಿನ ಪ್ರಾಣಕ್ಕೆ ಕಂಟಕವಾದ ಘಟನೆ ಬೈಕಂಪಾಡಿ ಜಂಕ್ಷನ್ ಬಳಿ ಭಾನುವಾರ ಸಂಜೆ ನಡೆದಿದೆ.
ಮೃತರನ್ನು ಕೃಷ್ಣಾಪುರ ನಿವಾಸಿ ಅಬ್ದುಲ್ ಬಶೀರ್ ಹಾಗೂ ಪುತ್ರ ಮೂರು ವರ್ಷದ ಅವರ ಪುತ್ರ ಶಯಾನ್ ಎಂದು ಗುರುತಿಸಲಾಗಿದೆ.
ಮೂರು ವರ್ಷದ ಪುತ್ರನೊಂದಿಗೆ ಮಂಗಳೂರಿನಿಂದ ಕೃಷ್ಣಾಪುರಕ್ಕೆ ತೆರಳುತ್ತಿದ್ದ ದಂಪತಿಯ ಸ್ಕೂಟರ್ ಗೆ ಬೈಕಂಪಾಡಿ ಜಂಕ್ಷನ್ ಬಳಿಯಲ್ಲಿ ಲಾರಿಯೊಂದು ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟರ್ ನಲ್ಲಿದ್ದ ಮೂವರು ರಸ್ತೆಗುರುಳಿದ್ದಾರೆ. ತಾಯಿಯ ಕೈಯಲ್ಲಿ ಕುಳಿತಿದ್ದ ಮೂರು ವರ್ಷದ ಮಗು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರೆ, ತೀವ್ರ ಗಾಯಗೊಂಡಿದ್ದ ಮಗುವಿನ ತಂದೆಯೂ ಸೋಮವಾರ ಬೆಳಗ್ಗಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ಅಬ್ದುಲ್ ಬಶೀರ್ ಅವರ ಪತ್ನಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇಬ್ಬರು ಕಳೆದುಕೊಂಡ ಇಡೀ ಕುಟುಂಬವೇ ಶೋಕದಲ್ಲಿ ಮಡುಗಟ್ಟಿದೆ.
Follow us on Social media