ಕಾಸರಗೋಡು : ಇಲ್ಲಿನ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ನಡೆದ ಭೀಕರ ಕಾರು ಅಪಘಾತವೊಂದರಲ್ಲಿ ಇಬ್ಬರು ಪ್ರಯಾಣಿಕರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಕಾಸರಗೋಡು ತಳಂಗರೆಯ ಮಿದ್ ಲಾಜ್ (18) ಹಾಗೂ ಕುಂಬಳೆ ಬದ್ರಿಯಾ ನಗರದ ಉಸೈಫ್ (17) ಮೃತಪಟ್ಟವರು. ಇನ್ನು ಅಪಘಾತದಲ್ಲಿ ಮೊಗ್ರಾಲ್ ನ ಮುಹಮ್ಮದ್ ಸಾಹಿಲ್ ಎಂಬಾತನಿಗೆ ಗಂಭೀರ ಗಾಯವಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದ್ದು, ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media