Breaking News

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ವಿನಾಯಕ್ ಜೋಶಿ, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜತೆ ವಿವಾಹ

ಆರ್‌ಜೆ  ಹಾಗೂ ನಟ ವಿನಾಯಕ್ ಜೋಷಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ., ಬಹುಮುಖ ಪ್ರತಿಭೆಯ ನಟ ಶೀಘ್ರವೇ ತನ್ನ ಆತ್ಮೀಯ ಗೆಳತಿ ಹಾಗೂ ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ವಿವಾಹವಾಗುತ್ತಿದ್ದಾರೆ.

ತಮ್ಮ ಭಾವೀ ವರನ ಬಗ್ಗೆ ಮಾತನಾಡಿರುವ ವರ್ಷಾ “ನಾವಿಬ್ಬರೂ ಬಾಲ್ಯದಲ್ಲಿ ಒಟ್ಟಿಗೇ ಆಟವಾಡುತ್ತಾ ಬೆಳೆದವರು ಆದರೆ 25 ವರ್ಷಗಳ ನಂತ ಮತ್ತೀಗ ಸಂಪರ್ಕಕ್ಕೆ ಬಂದಿದ್ದು ವಿವಾಹದ ಮೂಲಕ ಹೊಸ ಜೀವನದತ್ತ ಹೊರಳುತ್ತಿದ್ದೇವೆ.” ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ವಿನಾಯಕ್ ಜೋಶಿ “ನಾವು 7ನೇ ವಯಸ್ಸಿನಲ್ಲಿದ್ದಾಗ ಒಟ್ಟಾಗಿ ಡ್ಯಾನ್ಸ್ ಮಾಡಿದ್ದೆವು.  25 ವರ್ಷಗಳ ನಂತರ ಒಬ್ಬ ಸಾಮಾನ್ಯ ಸ್ನೇಹಿತನ ಮೂಲಕ ನಮ್ಮಿಬ್ಬರ ಭೇಟಿ ಆಗಿತ್ತು. ಅಂದಿನಿಂದ ನಾವು ಭೇಟಿಯಾಗುವುದನ್ನು ನಿಲ್ಲಿಸಲಿಲ್ಲ. ಅವರು(ವರ್ಷಾ)  ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಮತ್ತು ದೇಶವನ್ನು ಪ್ರತಿನಿಧಿಸುವ ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ ಕಳೆದ ವರ್ಷ ವೃತ್ತಿನಿರತ ಬ್ಯಾಡ್ಮಿಂಟನ್ ನಿಂದ ನಿವೃತ್ತರಾದಾಗ ಅವರ ವಿಶ್ವ ಶ್ರೇಯಾಂಕ 120 ಆಗಿತ್ತು. ಪ್ರಸ್ತುತ ಅವರು ಅಕಾಡೆಮಿಯಲ್ಲಿ ಮುಖ್ಯ ತರಬೇತುದಾರರಾಗಿದ್ದಾರೆ. ” ಎಂದರು.

ವಿನಾಯಕ್ ಜೋಶಿ ಶಿವರಾಜ್ ಕುಮಾರ್ ಮತ್ತು ರಮೇಶ್ ಅರವಿಂದ್ ಅಭಿನಯದ “ನಮ್ಮೂರ ಮಂದಾರಹೂವೆ” ಚಿತ್ರದ ಮೂಲಕ ಬಾಲ ಕಲಾವಿದರಾಗಿ ತಮ್ಮ ನಟನಾವೃತ್ತಿ ಪ್ರಾರಂಭಿಸಿದ್ದರು. ಅಂದಿನಿಂದ ಅವರು 70 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಇದರಲ್ಲಿ ಅಮೃತವರ್ಷಿಣಿ, ಲಾಲಿ, ಸಿಂಹದ ಮರಿಸೈನ್ಯ, ಕುರಿಗಳು ಸಾರ್ ಕುರಿಗಳು, ಅಪ್ಪು, ಕಾಂತಿ, ನನ್ನಾ ಕನಸಿನ ಹೂವೆ, ಮಿಂಚಿನ ಓಟ, ಚಿತ್ರ, ಗೋವಿನಾದಾಯನಮಃ, ಜಾಗ್ವಾರ್ ಇನ್ನೂ ಮುಂತಾದವು ಮುಖ್ಯವಾಗಿದೆ.

ಇದಲ್ಲದೆ ಅನೇಕ ಟಿವಿ ಧಾರಾವಾಹಿಗಳಲ್ಲಿ ಸಹ ಕಾಣಿಸಿಕೊಂಡಿದ್ದ ಜೋಶಿ ಫಣಿ ರಾಮಚಂದ್ರ ಅವರ “ದಂಡಪಿಂಡಗಳು”, ಟಿಎಸ್ ನಾಗಾಭರಣರ “ಮುಸ್ಸಂಜೆ” ಧಾರಾವಾಹಿಗಳಿಂಡಪ್ರಸಿದ್ದವಾಗಿದ್ದರು. ಕಿಚ್ಚ ಸುದೀಪ್ ನಡೆಸಿಕೊಟ್ಟ ಬಿಗ್ ಬಾಸ್ ಸೀಸನ್ 3ಒಳಗೊಂಡಂತೆ ಅನೇಕ ಕ ರಿಯಾಲಿಟಿ ಶೋಗಳಲ್ಲಿ ಅವರು ಭಾಗವಹಿಸಿದ್ದರು.

ಇನ್ನು ವರ್ಷಾ ಬೆಳವಾಡಿ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿದ್ದು ಕಳೆದ 10 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×