ಬಂಟ್ವಾಳ: ಕೊರೊನಾ ಸಂದಿಗ್ದತೆಯ ಕಾಲಘಟ್ಟದಲ್ಲಿ ತರಾತುರಿಯಲ್ಲಿ ಶಾಲೆ ಪ್ರಾರಂಭಿಸುವ ಬದಲು ಮುಂದಿನ ವರ್ಷ ಶಾಲೆ ಆರಂಭಿಸಿ ಎಂದು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ|ಪ್ರಭಾಕರ್ ಭಟ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಾಂಕ್ರಮಿಕ ರೋಗ ಕೊರೊನಾದ ಹಾವಳಿ ಹೆಚ್ಚಿರುವ ಈ ಸಂದರ್ಭ ಶಾಲೆ ಪ್ರಾರಂಭ ಮಾಡುವುದು ಸಮಂಜಸವಲ್ಲ. ಹಾಗಾಗಿ ಮುಂದಿನ ವರ್ಷವೇ ಶಾಲೆ ಪ್ರಾರಂಭಿಸಿ ಎಂದು ಅವರು ಹೇಳಿದ್ದಾರೆ. ಶಾಲಾ ಪ್ರಾರಂಭದ ಕುರಿತು ಪೋಷಕರ ಸಭೆ ಕರೆದಾಗಲೂ ಈ ವರ್ಷ ಶಾಲೆ ಪ್ರಾರಂಭ ಬೇಡ ಎನ್ನುವ ಅಭಿಪ್ರಾಯ ಮಕ್ಕಳ ಪೋಷಕರಿಂದ ಕೇಳಿಬಂದಿತ್ತು ಎಂದು ಹೇಳಿದ್ದಾರೆ.
ಇದರೊಂದಿಗೆ ಶಾಲಾ ಶುಲ್ಕದ ನೆಪದಲ್ಲಿ ಶಾಲಾ ಮತ್ತು ಕಾಲೇಜುಗಳಿಂದ ವಿದ್ಯಾರ್ಥಿಗಳ ಪೋಷಕರ ಸುಲಿಗೆ ಮಾಡುತ್ತಿರುವುದು ಅಮಾನವೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow us on Social media