ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾಗೆ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಯನ್ನು ಬಂಧಿಸಿ ಉಪ್ಪಾರಪೇಟೆ ಠಾಣೆ ಪೊಲೀಸರು, ನಂತರ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿದ್ದಾರೆ.
ಈಕೆಗೆ ಜಾಮೀನು ನೀಡದಂತೆ ಮಾಡಿರುವ ವಾದವನ್ನು ಕೋರ್ಟ್ ಪುರಸ್ಕರಿಸಿದ್ದು, ದೇಶದ್ರೋಹದ ಕೆಲಸ ಮಾಡಿರುವ ಅಮೂಲ್ಯಳಿಗೆ ಜಾಮೀನು ಸಿಕ್ಕಿದರೆ ಆಕೆ ಬೇರೆ ಅಪರಾಧಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಆಕೆ ತಲೆ ಮರೆಸಿಕೊಳ್ಳುವ ಸಾಧ್ಯತೆ ಇದೆ ಇರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಆಕೆಗೆ ಜಾಮೀನು ನೀಡಬಾರದೆಂಬ ವಾದವನ್ನು ಕೋರ್ಟ್ ಮಾನ್ಯ ಮಾಡಿದೆ.
ಫೆಬ್ರವರಿಯಲ್ಲಿ ನಡೆದ ಸಮಾವೇಶದಲ್ಲಿ ಅಮೂಲ್ಯ, ಪಾಕಿಸ್ತಾನ್ ಜಿಂದಾಬಾದ್ ಎಂದ ಕೆಲವೇ ಕ್ಷಣದಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಬದಲಾಯಿಸಿದ್ದಳು. ಅಮೂಲ್ಯ ವಿರುದ್ದ ಬಲವಾದ ವಿರೋಧಗಳು ವ್ಯಕ್ತವಾಗುತ್ತಿದ್ದ ಸಂದರ್ಭ, ನಾನು ಹೇಳಲು ಹೊರಟ್ಟಿದ್ದು ಬೇರೆ. ನನಗೆ ಅದನ್ನು ಹೇಳಲು ಅವಕಾಶ ನೀಡಲಿಲ್ಲ. ನನ್ನ ಕೈಯಿಂದ ಮೈಕ್ ಕಿತ್ತುಕೊಂಡಿದ್ದರು ಎಂದು ಹೇಳಿದ್ದಳು.
Follow us on Social media