Breaking News

ಜನಾಂಗೀಯ ನಿಂದನೆ: ಡರೇನ್ ಸಾಮಿ ಆರೋಪಕ್ಕೆ ಪುಷ್ಠಿ ನೀಡಿದ ಇಶಾಂತ್ ಶರ್ಮಾ ಪೋಸ್ಟ್!

ನವದೆಹಲಿ: ವೆಸ್ಟ್ ಇಂಡೀಸ್ ಕ್ರಿಕೆಟಿಗರ ಇಂಡಿಯನ್‌ ಪ್ರೀಮಿಯರ್ ಲೀಗ್ (IPL) ಜನಾಂಗೀಯ ನಿಂದನೆ ಆರೋಪಕ್ಕೆ ಪುಷ್ಠಿ ದೊರೆತಿದ್ದು, ಭಾರತ ತಂಡದ ಕ್ರಿಕೆಟಿಗ ಇಶಾಂತ್ ಶರ್ಮಾರ ಇನ್ ಸ್ಟಾಗ್ರಾಮ್ ಪೋಸ್ಟ್ ಇದೀಗ ಭಾರಿ ವೈರಲ್ ಆಗುತ್ತಿದೆ.

ಐಪಿಎಲ್ ಕ್ರಿಕೆಟ್ ಟೂರ್ನಿಯ ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿ ತಮ್ಮನ್ನು ವರ್ಣಬೇಧ ಅರ್ಥವಿರುದ ‘ಅಡ್ಡನಾಮ’ದಿಂದ ಕರೆಯಲಾಗುತ್ತಿತ್ತು ಎಂದು ವೆಸ್ಟ್ ಇಂಡೀಸ್ ಆಟಗಾರ ಡರೆನ್ ಸಾಮಿ ಮಾಡಿದ್ದ ಆರೋಪಕ್ಕೆ ಪುಷ್ಟಿ ದೊರೆತಿದ್ದು. 2014ರಲ್ಲಿ ತಂಡದ ಬೌಲರ್ ಇಶಾಂತ್ ಶರ್ಮಾ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಪೋಸ್ಟ್ ನಲ್ಲಿ ಸಾಮಿ ಅವರನ್ನು ‘ಕಾಲೂ’ (ಕರಿಯಾ) ಎಂದು ಬರೆದಿದ್ದಾರೆ. ಮಂಗಳವಾರ ಸಾಮಿ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ವಿಡಿಯೊದಲ್ಲಿ, ಸನ್‌ರೈಸರ್ಸ್‌ ತಂಡದಲ್ಲಿ ತಮಗೆ ಆಗಿದ್ದ ಅನುಭವವನ್ನು ಹಂಚಿಕೊಂಡಿದ್ದರು. ಅಲ್ಲದೇ ಆ ರೀತಿ ತಮ್ಮನ್ನು ಕರೆದವರು ತಾವಾಗಿಯೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತಾವೇ ಅವರ ಹೆಸರು ಹೇಳುವುದಾಗಿ ಎಚ್ಚರಿಕೆ ನೀಡಿದ್ದರು.

‘2014ರಲ್ಲಿ ನಾನು ಸನ್‌ರೈಸರ್ಸ್‌ನಲ್ಲಿ ಆಡುವಾಗ ನನ್ನನ್ನು ಕಾಲೂ (ಕಪ್ಪು ಬಣ್ಣದ ಮನುಷ್ಯ) ಎಂದು ಕರೆಯುತ್ತಿದ್ದರು. ಎಲ್ಲರೂ ನಗುತ್ತಿದ್ದರು. ನಾನೂ ಅದು ತಮಾಷೆಯಾಗಿರಬಹುದು. ಇದೆಲ್ಲ ಗೆಳೆಯರಲ್ಲಿ ಸಹಜ ಎಂದುಕೊಂಡಿದ್ದೆ. ಈಚೆಗೆ ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌ ಸಾವಿನ ವಿಷಯದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ  ವೆಬ್‌ ಸಿರೀಸ್ ನಟ ಮತ್ತು ನಿರೂಪಕ ಹಸನ್ ಮಿನಾಜ್‌ ಕಾರ್ಯಕ್ರಮವನ್ನು ನೋಡಿದ್ದೆ. ಅದರಲ್ಲಿ ಹಸನ್  ಮಾತನಾಡುವಾಗ ಈ ಪದದ ಅರ್ಥ ಗೊತ್ತಾಯ್ತು. ಸಿಟ್ಟು, ಬೇಸರ ಮೂಡಿದೆ’ ಎಂದು ಸಾಮಿ ಹೇಳಿದ್ದಾರೆ. 

ಈ ವಿಡಿಯೋ ವೈರಸ್ ಆಗುತ್ತಿರುವ ಬೆನ್ನಲ್ಲೇ ಇದೀಗ 2014ರ ಇಶಾಂತ್ ಶರ್ಮಾ ಪೋಸ್ಟ್ ಕೂಡ ಮುನ್ನೆಲೆಗೆ ಬಂದಿದೆ. ಅದರಲ್ಲಿ  ಇಶಾಂತ್, ಸಾಮಿ, ಭುವನೇಶ್ವರ್ ಕುಮಾರ್ ಮತ್ತು ಡೆಲ್ ಸ್ಟೇಯ್ನ್‌ ಇದ್ದಾರೆ. ಇಶಾಂತ್ ಪೋಸ್ಚ್ ಗೆ ‘ನಾನು, ಭುವಿ, ಕಾಲೂ ಮತ್ತು ಗನ್‌ ಸನ್‌ರೈಸರ್ಸ್‌’ ಎಂದು ಬರೆದಿದ್ದಾರೆ.

ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯಿಸಿರುವ, ಆಗ ತಂಡದಲ್ಲಿದ್ದ ಆಲ್‌ರೌಂಡರ್ ಇರ್ಫಾನ್ ಪಠಾಣ್,  ‘ನಮ್ಮ ತಂಡದ ಸಭೆಗಳಲ್ಲಿ ಅಂತಹ ಯಾವುದೇ ಪದಪ್ರಯೋಗವಾಗಿದ್ದಿಲ್ಲ. ಆದರೆ, ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ದಕ್ಷಿಣ ಭಾರತದ ಕ್ರಿಕೆಟಿಗರು ಉತ್ತರ ಭಾರತದಲ್ಲಿ ಆಡುವಾಗ ಜನಾಂಗೀಯ ನಿಂದನೆಗೆ ಗುರಿಯಾಗಿರುವುದು ಗೊತ್ತಿದೆ ಎಂದು ಹೇಳಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×