ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು 23 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಈ ಪೈಕಿ ಎಲ್ಲಾ 23 ಮಂದಿ ಪುರುಷರಾಗಿದ್ದಾರೆ. ಇಬ್ಬರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಮೂವರು ದುಬೈನಿಂದ ಮರಳಿದವರಾಗಿದ್ದಾರೆ. ಉಳಿದ 18 ಮಂದಿ ಸೌದಿಯಿಂದ ಮರಳಿದವರಾಗಿದ್ದಾರೆ. ಈ ಎಲ್ಲಾ 23 ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಮೂಲಕ ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 218ಕ್ಕೆ ಏರಿಕೆಯಾಗಿದೆ. ಈ ಪೈಕಿ 96 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 115 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
Follow us on Social media