ಕಾರ್ಕಳ: ಅಪ್ರಾಪ್ತ ಬಾಲಕನೊಂದಿಗೆ ಇಚ್ಚೆಗೆ ವಿರುದ್ಧವಾಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ.
ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಭರತ್ ರೆಡ್ಡಿ ಮತ್ತು ಕಾರ್ಕಳ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದಿಲೀಪ್ ಮತ್ತು ನಾಸಿರ್ ಹುಸೇನ್ ಅವರನ್ನೊಳಗೊಂಡ ಕಾರ್ಕಳ ಗ್ರಾಮೀಣ ಪೊಲೀಸ್ ಸಿಬ್ಬಂದಿಯ ತಂಡವು ಸಚರಿಪೇಟೆಯ ಇಬ್ರಾಹಿಂ ಎಂಬಾತನನ್ನು ಬಂಧಿಸಿದೆ.
ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆ ಬಳಿಕ ಸಂತ್ರಸ್ತ ಬಾಲಕ ತನ್ನ ಹೆತ್ತವರೊಂದಿಗೆ ಬಂದು ದೂರು ದಾಖಲಿಸಿದ್ದಾನೆ.
ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕದ ಕಾನೂನು ಪರಿಶೀಲನಾ ಅಧಿಕಾರಿ ಪ್ರಭಾಕರ್ ಆಚಾರ್ ಅವರು ಬಾಲಕ ಮತ್ತು ಅವರ ಪೋಷಕರೊಂದಿಗೆ ವೈಯಕ್ತಿಕ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮವಿಶ್ವಾಸ ತುಂಬಿದರು. ಅವರು ಬಾಲಕನಿಗೆ ಶಿಕ್ಶಣ ಮುಂದುವರಿಸಬೇಕೆಂದು ಪ್ರೋತ್ಸಾಹಿಸಿ ಸಲಹೆ ನೀಡಿದರು.
Follow us on Social media