Breaking News

ಕೇರಳ ಸಂಸದ ಕೇಂದ್ರದ ಮಾಜಿ ಸಚಿವ ವಿರೇಂದ್ರ ಕುಮಾರ್ ವಿಧಿವಶ

ಕೋಜಿಕ್ಕೋಡ್: ಕೇಂದ್ರದ ಮಾಜಿ ಸಚಿವ ರಾಜ್ಯಸಭೆ ಸದಸ್ಯ ವಿರೇಂದ್ರ ಕುಮಾರ್ ಗುರುವಾರ ರಾತ್ರಿ 11 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ 84 ವರ್ಷದ  ವೀರೇಂದ್ರ ಕುಮಾರ್ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಲೋಕತಾಂತ್ರಿಕ ಜನತಾದಳದ ಅಧ್ಯಕ್ಷರಾಗಿದ್ದ ವಿರೇಂದ್ರ ಕುಮಾರ್ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು, ಸುದ್ದಿ ಸಂಸ್ಥೆಗಳಾದ ಪಿಟಿಐ ಮತ್ತು ಐಎನ್ ಎಸ್ ಗಳ ಅಧ್ಯಕ್ಷರು ಮತ್ತು ಮಾತೃಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಕೇರಳದ ವೈನಾಡಿನ ಕಲ್ಪೇಟದ ಜೈನ ಕುಟುಂಬದಲ್ಲಿ ಜನಿಸಿದ ವಿರೇಂದ್ರ ಕುಮಾರ್ 1968 ರಲ್ಲಿ ಸಂಯುಕ್ತ ಸೋಷಲಿಸ್ಟ್ ಪಕ್ಷದ ಮೂಲಕ ರಾಜಕೀಯಕ್ಕೆ ಪಾದರ್ಪಣೆ ಮಾಡಿದ್ದರು.

1996 ಮತ್ತು 1997 ರಲ್ಲಿ ಕೋಜಿಕ್ಕೋಡ್ ಸಂಸದರಾಗಿದ್ದ ಇವರು ಕೇಂದ್ರದಲ್ಲಿ ಸಚಿವರು ಆಗಿದ್ದರು, ಉತ್ತಮ ಬರಹಗಾರರಾಗಿದ್ದ ವಿರೇಂದ್ರ ಕುಮಾರ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ- ಪುರಸ್ಕಾರಗಳು ಸಂದಿವೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×