ಬೆಂಗಳೂರು : ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೇ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಒಂದೇ ದಿನ 116 ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆ ವರದಿ ಪ್ರಕಾರ, ಉಡುಪಿ 25, ಮಂಡ್ಯ 15, ಹಾಸನ 13, ಬಳ್ಳಾರಿ 11, ಉತ್ತರ ಕನ್ನಡ 9, ಬೆಳಗಾವಿ 9, ಬೆಂಗಳೂರು 7 ದಕ್ಷಿಣ ಕನ್ನಡ 6, ಶಿವಮೊಗ್ಗ 6, ಧಾರವಾಡ 5, ದಾವಣಗೆರೆ 3, ಗದಗ 2, ಚಿಕ್ಕಬಳ್ಳಾಪುರ 2, ತುಮಕೂರು, ವಿಜಯಪುರ, ಮೈಸೂರಿನಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ.
ಒಟ್ಟಾರೆ 1578 ಪ್ರಕರಣಗಳ ಪೈಕಿ 570 ಮಂದಿ ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 966 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
Follow us on Social media