ಜಾನ್ಸಿ(ಉತ್ತರ ಪ್ರದೇಶ) : ವಲಸೆ ಕಾರ್ಮಿಕರ ಸಾವು ಮುಂದುವರಿದಿದೆ. ಜಾನ್ಸಿ-ಮಿರ್ಜಾಪುರ್ ಹೆದ್ದಾರಿಯಲ್ಲಿ ಸಾಗಾಟಕ್ಕೆ ಬಳಸುವ ಡಿಸಿಎಂ ವಾಹನ ಮಗುಚಿಬಿದ್ದು ಮೂರು ಮಂದಿ ವಲಸೆ ಕಾರ್ಮಿಕರು ಮೃತಪಟ್ಟು 12 ಮಂದಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಅಲಹಾಬಾದ್ ಸಮೀಪ ಹೆದ್ದಾರಿಯಲ್ಲಿ ಕಳೆದ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು ವಾಹನದಲ್ಲಿ ಸುಮಾರು 17 ಮಂದಿ ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.