ಬೆಂಗಳೂರು : ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ, ಮಾಜಿ ಡಾನ್, ಉದ್ಯಮಿ ಎನ್ ಮುತ್ತಪ್ಪ ರೈ ಅಂತ್ಯ ಸಂಸ್ಕಾರ ಅವರ ನಿವಾಸ ಬಿಡದಿಯ ತೋಟದಲ್ಲಿ ನೆರವೇರಿತು.
ಅಂತ್ಯಸಂಸ್ಕಾರವೇನು ನಿರಾತಂಕವಾಗಿ ಸಾಗಿತು. ಆದರೆ ಕೊನೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ವಿವಾದ ಸೃಷ್ಟಿಯಾಗಿದೆ. ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪದ ಮೇಲೆ 6 ಗನ್ ಮ್ಯಾನ್ ಗಳನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುತ್ತಪ್ಪ ರೈ ಅವರಿಗೆ ಗನ್ ಮ್ಯಾನ್ ಗಳಾಗಿ ಕೆಲಸ ಮಾಡುತ್ತಿದ್ದವರು ಗೌರವ ಸೂಚಕವಾಗಿ 5 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದರು.
Follow us on Social media