ಮುಂಬೈ : ಮುಂಬೈ ನಲ್ಲಿ ಒಂದೇ ದಿನ 998 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ ಸಂಖ್ಯೆ 16,579ಕ್ಕೆ ಏರಿಕೆಯಾಗಿದೆ ಎಂದು ಬೃಹತ್ ಮುಂಬೈ ನಗರಪಾಲಿಕೆ ಹೇಳಿದೆ.
ಕೊರೋನಾ ವೈರಸ್ ನಿಂದಾಗಿ ಮುಂಬೈ ನಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 621 ಕ್ಕೆ ಏರಿಕೆಯಾಗಿದೆ. 998 ಪ್ರಕರಣಗಳ ಪೈಕಿ 364 ಪ್ರಕರಣಗಳು ಖಾಸಗಿ ಲ್ಯಾಬ್ ಗಳಿಂದ ದೃಢೀಕರಣಗೊಂಡಿವೆ.
4,234 ರೋಗಿಗಳು ಈ ವರೆಗೂ ಡಿಸ್ಚಾರ್ಜ್ ಆಗಿದ್ದಾರೆ. 443 ಜನರನ್ನು ಆಸ್ಪತ್ರೆಯಿಂದ ಮನೆಗೆ ಕಳಿಸಲಾಗಿದೆ.
Follow us on Social media