Breaking News

ಭಟ್ಕಳದಲ್ಲಿ ಮತ್ತೆ 7 ಹೊಸ ಕೊರೋನಾ ಪಾಸಿಟಿವ್: ಆತಂಕದಲ್ಲಿ ನಿವಾಸಿಗಳು

ಕಾರವಾರ : ಭಟ್ಕಳದಲ್ಲಿ ಮತ್ತೆ 7 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ 31 ಪ್ರಕರಣಗಳು ಪತ್ತೆಯಾದಂತಾಗಿದೆ‌. ಈ ಪೈಕಿ 11 ಜನ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು 20 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಟ್ಕಳದಲ್ಲಿ ಶುಕ್ರವಾರವೂ ಸಹ 12 ಪ್ರಕರಣಗಳು ದಾಖಲಾಗಿತ್ತು. ಶನಿವಾರ ಪತ್ತೆಯಾದ ಏಳು ಪ್ರಕರಣಗಳಲ್ಲಿ ಇಬ್ಬರು ಮಕ್ಕಳು ಹಾಗೂ ಮೂವರು ವೃದ್ಧರೂ ಸೇರಿರುವುದು ಆತಂಕ ಹುಟ್ಟಿಸಿದೆ. ಎರಡು ವರ್ಷದ ಆರು ತಿಂಗಳ ಬಾಲಕಿ ಹಾಗೂ ಒಂದು ವರ್ಷ ಐದು ತಿಂಗಳ ಬಾಲಕ ಸೇರಿ ಒಟ್ಟು ಏಳು ಜನರಿಗೆ ಸೊಂಕು ದೃಡಪಟ್ಟಿದ್ದು ಪ್ರಾಥಮಿಕ ಸೋಂಕಿತ ವ್ಯಕ್ತಿಯ
ಕುಟುಂಬಸ್ಥರೊಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ ಎನ್ನಲಾಗಿದೆ.

ಮೇ 6 ರಂದು ಸೋಂಕು ದೃಢಪಟ್ಟ ಯುವತಿ‌ಯ (ಪಿ 659) ಪ್ರಾಥಮಿಕ ಸಂಪರ್ಕದಲ್ಲಿದ್ದ 19 ಜನರ ಪೈಕಿ 12 ಜನರಿಗೆ ಸೋಂಕು ದೃಢಪಟ್ಟಿತ್ತು.‌ ಈ 12 ಜನರ ಸಂಪರ್ಕದಲ್ಲಿದ್ದ ಒಟ್ಟು 55 ಜನರ ಗಂಟಲು ದ್ರವದ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ 7 ಮಂದಿಗೆ ಸೋಂಕು ಕಂಡುಬಂದಿದೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×