ಮಂಗಳೂರು : ವಿದೇಶಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರನ್ನು ಕ್ವಾರಂಟೈನ್ನಲ್ಲಿ ಇರಿಸಲು ಜಿಲ್ಲಾಡಳಿತವು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದೆ.
ಮೇ 12 ರಿಂದ ಜಿಲ್ಲೆಗೆ ವಿದೇಶದಲ್ಲಿರುವ ಕರಾವಳಿಯ ಜನರು ಆಗಮಿಸಲಿದ್ದು ಅವರನ್ನು 6 ಹಾಸ್ಟೆಲ್ ಹಾಗೂ 18 ಖಾಸಗಿ ಹೊಟೇಲ್/ ಲಾಡ್ಜ್ಗಳಲ್ಲಿ ಇರಿಸಲಾಗುವುದು ಎಂದು ತಿಳಿದು ಬಂದಿದೆ.
ಮಂಗಳೂರಿಗೆ ಮೇ 12 ರಂದು ಬರುವ ಮೊದಲ ವಿಮಾನದಲ್ಲಿ 170 ಜನರು ಆಗಮಿಸಲಿದ್ದಾರೆ. ಅದರಲ್ಲಿರುವ ದ.ಕ. ಜಿಲ್ಲೆಯ ಜನರಿಗೆ ಮಾತ್ರ 14 ದಿನಗಳ ಕಾಲ ಕ್ವಾರಂಟೈನ್ಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯವರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಮೇ 12 ರಂದು ವಿಮಾನದಲ್ಲಿ ಆಗಮಿಸುವ ಎನ್ಆರ್ಐಗಳಿಗೆ ಕ್ವಾರಂಟೈನ್ ವ್ಯವಸ್ಥೆಯ ಕುರಿತಾಗಿ ಶನಿವಾರ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಿದ್ಧತಾ ಸಭೆ ನಡೆಸಿ ಚರ್ಚಿಸಲಾಗಿದೆ.
Follow us on Social media