ಲಖನೌ : ಪಾನ್ ಮಸಾಲ ತಯಾರಿಕೆ ಹಾಗೂ ಮಾರಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ತೆರವುಗೊಳಿಸಿದೆ.
ಆಹಾರ ಸುರಕ್ಷತೆ ಹಾಗೂ ಔಷಧ ವಿಭಾಗದ ಆಯುಕ್ತರಾದ ಅನಿತಾ ಸಿಂಗ್ ನಿರ್ಬಂಧ ತೆರವು ಆದೇಶ ಹೊರಡಿಸಿದ್ದು, ಪಾನ್ ಮಸಾಲ, ಸ್ಟೇಷನರಿ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಆದರೆ ಗುಟ್ಕಾ, ತಂಬಾಕು ಮಾರಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಹಸಿರು, ಕಿತ್ತಳೆ ಝೋನ್ ಗಳಲ್ಲಿ ಸ್ಟೇಷನರಿ, ಪುಸ್ತಕಗಳ ಮಳಿಗೆಗಳನ್ನು ತೆರೆಯುವುದಕ್ಕೆ ಆದಿತ್ಯನಾಥ್ ಸರ್ಕಾರ ಅನುಮತಿ ನೀಡಿದೆ. ಸ್ಟೇಷನರಿ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿರುವ ಕ್ರಮವನ್ನು ಪೋಷಕರು ಸ್ವಾಗತಿಸಿದ್ದಾರೆ. ಆನ್ ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಪುಸ್ತಕಗಳ ಅಗತ್ಯವಿತ್ತು.
Follow us on Social media