ನವದೆಹಲಿ: ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಗುರುವಾರ 52 ಸಾವಿರ ಗಡಿ ದಾಟಿದ್ದು ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 52 ಸಾವಿರದ 952 ಆಗಿದೆ.
ಆರೋಗ್ಯ ಸಚಿವಾಲಯದ ಅಂಕಿಅಂಶ ಪ್ರಕಾರ ದೇಶದಲ್ಲಿ 35 ಸಾವಿರದ 902 ಸಕ್ರಿಯ ಕೊರೋನಾ ಸೋಂಕಿತ ಕೇಸುಗಳಿದ್ದು 15 ಸಾವಿರದ 266 ರೋಗಿಗಳು ಗುಣಮುಖರಾಗಿದ್ದಾರೆ, ಇನ್ನು ಹಲವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ದೇಶದಲ್ಲಿ ಇದುವರೆಗೆ ಒಟ್ಟಾರೆ 1,783 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಮಹಾರಾಷ್ಟ್ರದ ಸೋಲಾಪುರದ ಎಂಐಡಿಸಿ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ ಪೆಕ್ಟರ್ ಕಳೆದ ಮಂಗಳವಾರ ಕೊರೋನಾ ಸೋಂಕಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟ ಪೊಲೀಸ್ ಸಿಬ್ಬಂದಿ ಸಂಖ್ಯೆ 5ಕ್ಕೇರಿದೆ.
ದೇಶದಲ್ಲಿ ಮುಂಬೈ, ಪುಣೆ,ಥಾಣೆ, ದೆಹಲಿ ಮತ್ತು ಗುಜರಾತ್ ನ ಅಹಮದಾಬಾದ್, ಸೂರತ್ ನಗರಗಳಲ್ಲಿ ಹೆಚ್ಚು ಮಂದಿ ಕೊರೋನಾ ಸೋಂಕಿತರಿದ್ದಾರೆ.
ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಚೆನ್ನೈಯ ಕೊಯಂಬೆಡು ಸಗಟು ಮಾರುಕಟ್ಟೆ ಮುಚ್ಚಿರುವುದರಿಂದ ಚೆನ್ನೈ ನಗರದಲ್ಲಿ ತರಕಾರಿಗೆ ವ್ಯತ್ಯಯ ಉಂಟಾಗಿದೆ.
Follow us on Social media